ಸಮಾನತೆ ಸಾರಿ ಜಗತ್ತಿಗೆ ಬೆಳಕು ಚೆಲ್ಲಿದ ಬಸವಾದಿ ಶರಣರು: ಡಾ.ಶಿವಕುಮಾರ್ ಸ್ವಾಮೀಜಿ

Jan 29 2024, 01:33 AM IST
ಮಹಾಲಿಂಗಪುರ: ಅಂದು ಸರ್ವರೂ ಸಮಾನರು ಎಂದು ಸಾರಿ ಸಾರಿ ಹೇಳಿದರು. ಆವರ ಕಂಡ ಕನಸು ಇಂದಿಗೂ ಜಗತ್ತಿನ ಜನರೆಲ್ಲರೂ ಒಂದೇ ಮನುಜ ಕುಲ, ಉದೋಗ ಆಧರಿಸಿ ಹುಟ್ಟಿಕೊಂಡಿದ್ದು, ಜಾತಿ. ಆದರೆ ಹುಟ್ಟಿನಿಂದ ಯಾರೂ ನಿರ್ದಿಷ್ಟ ಜಾತಿಯಲ್ಲಿ ಹುಟ್ಟುವುದಿಲ್ಲ, ಹುಟ್ಟಿದು ಮನುಷ್ಯರಾಗಿ ಸಾಯುವುದು ಮನುಷ್ಯರಾಗಿಯೇ ಹೊರತು ಜಾತಿವಾದಿಯಾಗಿ ಅಲ್ಲ. ಅಂದೇ ಬಸವಾದಿ ಶರಣರು ಸಮಾನತೆ ಸಾರಿ ಜಗತ್ತಿಗೆ ಬೆಳಕು ಚೆಲ್ಲಿದ್ದರು ಎಂದು ಬಿದರ್‌ ಚಿದಂಬರ ಆಶ್ರಮದ ಡಾ.ಶಿವಕುಮಾರ್ ಸ್ವಾಮೀಜಿ ಹೇಳಿದರು. ನಗರದ ಬನಶಂಕರಿ ದೇವಸ್ಥಾನದ ಸಭಾ ಭವನದಲ್ಲಿ ಆರಂಭಗೊಂಡ ಪ್ರಕರಣ ಪ್ರವೀಣ ಶ್ರೀ ಬಸವಾನಂದರ 50 ನೇ ಪುಣ್ಯಾರಾಧನೆಯ ಸುವರ್ಣ ವೇದಾಂತ ಪರಿಷತ್ ಹಾಗೂ ಸಹಜಾನಂದ ಮಹಾಸ್ವಾಮಿಗಳು 80ನೇ ವರ್ಧಂತಿ (ಸಹಸ್ರ ಚಂದ್ರ ದರ್ಶನ) ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.