ಶಂಭುಲಿಂಗಾನಂದ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಸಂಭ್ರಮ
Jan 22 2024, 02:18 AM ISTಲೋಕಾಪುರ: ಪಟ್ಟಣದ ವೆಂಕಟೇಶ್ವನಗರದ ಬ್ರಹ್ಮಲೀನ ಶಂಭುಲಿಂಗಾನಂದ ಸ್ವಾಮಿಗಳ 26ನೆಯ ಪುಣ್ಯಾರಾಧನೆ ಪ್ರಯುಕ್ತ ಶನಿವಾರ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಕಾಡರಕೊಪ್ಪದ ನ್ಯಾಯವೇಂದಾಂತಾಚಾರ್ಯರ ದಯಾನಂದ ಸರಸ್ವತಿ ಮಹಾಸ್ವಾಮೀಜಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಶಂಭುಲಿಂಗಾನಂದ ಆಶ್ರಮದಿಂದ ಹೊರಟ ಅಲಂಕೃತಗೊಂಡ ಪಲ್ಲಕ್ಕಿ ಉತ್ಸವ ಸಕಲ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡೊಳ್ಳು, ಸಮಾಳ, ನೆರೆದಿದ್ದ ಜನರ ಗಮನ ಸೆಳೆಯಿತು. ಸುಮಂಗಲೆಯರು ಆರತಿಯೊಂದಿಗೆ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.