ರಾಮಲಲ್ಲಾ ಪ್ರತಿಷ್ಠೆಯಂದು ರಜೆ ನೀಡದ್ದಕ್ಕೆ ಆಕ್ಷೇಪವಾಟ್ಸಪ್ ಗ್ರೂಪ್ನಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ರಜಾ ನೀಡದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕುದಿದು ಹೋಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿ, ವಾಯ್ಸ್ ಮೆಸೇಜನ್ನು ವಾಟ್ಸಪ್ ಗ್ರೂಪ್ಗೆ ಹರಿಯಬಿಟ್ಟಿದ್ದ ಹಿನ್ನೆಲೆಯಲ್ಲಿ 2 ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಿಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.