ರಾಜ್ಯ ಸಾರಿಗೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ಭಾರೀ ಅಪಘಾತವೊಂದು ತಪ್ಪಿದೆ. ಬಸ್ನಲ್ಲಿದ್ದ 80 ಜನರು ಹಾಗೂ ಕಾರಿನಲ್ಲಿದ್ದ ನಾಲ್ವರು ಯಾವುದೇ ಸಾವು ನೋವು ಉಂಟಾಗದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ನಗರದ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳ ಬಳಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಸಂಚಾರ ಪೊಲೀಸರು 510ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಎರಡು ವರ್ಷಗಳಿಂದ ವಿವಾದದಲ್ಲಿ ಸಿಲುಕಿರುವ 545 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಮತ್ತೆ ಅಕ್ರಮದ ಆರೋಪ ಕೇಳಿ ಬಂದಿದೆ.
ಅನಾಥಾಶ್ರಮವೊಂದಲ್ಲಿ ಶಿಕ್ಷೆಯ ನೆಪದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ತಲೆಕೆಳಗಾಗಿ ನೇತು ಹಾಕುವುದು ಹಾಗೂ ಮೆಣಸಿನ ಹೊಗೆ ಹಾಕುವುದು ಸೇರಿದಂತೆ ಅನಾಗರಿಕ ಕೃತ್ಯಗಳ ಮೂಲಕ ಅತ್ಯಂತ ಕ್ರೂರವಾಗಿ ಹಿಂಸಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.