ಗೂಡ್ಸ್ ಟೆಂಪೋ ಡಿಕ್ಕಿ: ಬೈಕ್ ಸವಾರ ಸಾವು, ಮತ್ತೊಬ್ಬನಿಗೆ ತೀವ್ರ ಗಾಯಘಟನೆಯಲ್ಲಿ ಮದ್ದೂರು ತಾಲೂಕು ರುದ್ರಾಕ್ಷಿಪುರ ಗ್ರಾಮದ ಬಿ.ಆರ್.ಮಂಜು ಪುತ್ರ ಎಂ.ಅಜಯ್ ಕುಮಾರ್ (25) ಮೃತಪಟ್ಟ ಬೈಕ್ ಚಾಲಕ. ಅಪಘಾತದಲ್ಲಿ ತಲೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅಜಯ್ ನನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾನೆ. ಬೈಕ್ ಹಿಂದೆ ಕುಳಿತ್ತಿದ್ದ ಮಂಡ್ಯದ ಇರ್ಫಾನ್ ದೇಹದ ತೊಡೆ ಮತ್ತು ಇತರೆ ಭಾಗಗಳಿಗೆ ಗಾಯಗಳಾಗಿದ್ದು ಈತನನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.