ಹಳ್ಳಕ್ಕೆ ಮಗುಚಿ ಬಿದ್ದ ಕಾರು: ಮೂವರು ಯುವಕರ ಸಾವು, ಓರ್ವನಿಗೆ ಗಂಭೀರ ಗಾಯಅಕ್ಕಿಹೆಬ್ಬಾಳು ಗ್ರಾಮದ ಸ್ನೇಹಿತರ ಮನೆಯಿಂದ ಪಟ್ಟಣಕ್ಕೆ ನಾಲ್ವರು ಸ್ನೇಹಿತರು ಕಾರಿನಲ್ಲಿ ಆಗಮಿಸುತ್ತಿದ್ದರು. ಅಕ್ಕಿಹೆಬ್ಬಾಳು ಸೇತುವೆಗೆ ಸಮೀಪದ ತಿರುವಿನಲ್ಲಿ ವಾಹನ ನಿಯಂತ್ರಣ ತಪ್ಪಿದ ಪರಿಣಾಮ ಪಕ್ಕದ ಹಳ್ಳಕ್ಕೆ ಮಗುಚಿ ಬಿದ್ದಿದೆ. ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಜಯಕುಮಾರ್ ಪುತ್ರ ಸಾಗರ್ ಎಂಬ ಯುವಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.