ರಾಜ್ ಬಿ ಶೆಟ್ಟಿ ನಿರ್ಮಾಣ, ಜೆ ಪಿ ತುಮಿನಾಡು ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಕಂಡಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಶ್ರೀಶ್ರೀ ರವಿಶಂಕರ ಗುರೂಜಿ ಬಯೋಪಿಕ್ ‘ವೈಟ್’ನ ಚಿತ್ರೀಕರಣ ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ ಆರಂಭವಾಗಿದೆ
ನಟಿ ಐಶಾನಿ ಶೆಟ್ಟಿ ಅವರು ತಮ್ಮ ಮೊದಲ ನಿರ್ದೇಶನದ ಚಿತ್ರವನ್ನು ಆರಂಭಿಸಿದ್ದು, ಈ ಚಿತ್ರದ ಮೂಲಕ ತಾನೇ ನಿರ್ಮಾಪಕಿ ಕೂಡ ಆಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಕುಂತಲೆ ಸಿನಿಮಾಸ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ.
ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮಹತ್ವದ ಪಾತ್ರದಲ್ಲಿ ನಟಿಸುತ್ತಿದ್ದಾರೆ.
15 ವರ್ಷಗಳನ್ನು ಪೂರೈಸಿದ ಅಗರಂ ಫೌಂಡೇಷನ್ ಮೂಲಕ ಇಲ್ಲಿಯವರೆಗೂ 8 ಸಾವಿರ ಮಂದಿಯನ್ನು ಸೂರ್ಯ ಓದಿಸಿದ್ದಾರೆ.
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಬಳಿಯೂ ಒಂದು ನಿಗೂಢ ಪ್ರೇಮಕಥೆಯಿತ್ತು. ಅದೂ, ಬಾಲಿವುಡ್ ಜನಪ್ರಿಯ ನಟಿ ಶ್ರೀದೇವಿಯೊಂದಿಗೆ. ಆದರೆ ಅಲೌಕಿಕ ನಂಬಿಕೆಯೊಂದು ಶ್ರೀದೇವಿ ಬಳಿ ರಜನಿಕಾಂತ್ ಪ್ರೇಮ ನಿವೇದನೆ ಮಾಡುವುದನ್ನು ತಡೆದು ಸಂಬಂಧ ಕುದುರದಂತೆ ಮಾಡಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ನಟ ಸುದೀಪ್ ಅವರ ಹೊಸ ಹೇರ್ ಸ್ಟೈಲ್ ಸಾಕಷ್ಟು ವೈರಲ್ ಆಗುತ್ತಿದೆ. ಮೊದಲ ಬಾರಿಗೆ ಹೀಗೆ ಕರ್ಲಿ ಹೇರ್ ಸ್ಟೈಲ್ನಲ್ಲಿ ಸುದೀಪ್ ಅವರು ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಈ ಹೊಸ ಲುಕ್ಕಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ನಟಿ ಭಾವನಾ ಅವರು ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೊಮ್ಮಘಟ್ಟದಲ್ಲಿರುವ ನಿವಾಸದಲ್ಲಿ ಸೀಮಂತ ಶಾಸ್ತ್ರ ನಡೆಯಿತು.
ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ನಟ ಸಂತೋಷ್ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಸಾಗರ್ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.