ಫೆ.7ಕ್ಕೆ ಬಿಡುಗಡೆಯಾಗುವ ಮಿಸ್ಟರ್ ರಾಣಿ ಚಲನಚಿತ್ರವನ್ನು ವಾಸ್ಕೋಡಿಗಾಮ, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರ ನಿರ್ದೇಶಕರಾದ ಮಧುಚಂದ್ರ ಅವರು ನಿರ್ದೇಶಿಸಿದ್ದು, ರಾಜ್ಯದಲ್ಲೇ ಚಿತ್ರೀಕರಣ ಮಾಡಲಾಗಿದೆ.
ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರಿಗೆ ಗಂಡು ಮಗುವಿನ ಜನನವಾಗಿದೆ. ಈ ಜೋಡಿ ಮದುವೆ ವಾರ್ಷಿಕೋತ್ಸವ ಸಂಭ್ರಮ ಒಂದುಕಡೆಯಾದರೆ, ಈಗ ಈ ಜೋಡಿ ಬದುಕಿಗೆ ಇನ್ನೊಂದು ಪುಟ್ಟ ಜೀವದ ಆಗಮನವಾಗಿದ್ದು, ಈ ಸಂಭ್ರಮ ಡಬಲ್ ಆಗಿದೆ.
ಚಿಕಿತ್ಸೆಗಾಗಿ ಬೆಂಗಳೂರಿನಿಂದ ಅಮೆರಿಕಾಗೆ ಹೊರಡಲು ನಿಂತಾಗ ತುಂಬಾ ಭಯ ಆಯಿತು. ಏನೇ ಆದರೂ ಧೈರ್ಯವಾಗಿ ಎದುರಿಸಬೇಕೆಂದು ನಿರ್ಧರಿಸಿಕೊಂಡೆ. ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಎಲ್ಲರ ಆಶೀರ್ವಾದದಿಂದ ಆರೋಗ್ಯವಂತನಾಗಿ ಮರಳಿ ಬಂದಿದ್ದೇನೆ. ಹೀಗೆ ಹೇಳಿದ್ದು ನಟ ಶಿವರಾಜ್ ಕುಮಾರ್ ಅವರು.
ಕನ್ನಡ ಕಿರುತೆರೆಯ ರಿಯಾಲಿಟಿ ಶೋ ‘ಬಿಗ್ ಬಾಸ್’ 11ನೇ ಸೀಸನ್ನಲ್ಲಿ ಕುರಿಗಾಹಿ ಹಾಗೂ ಗಾಯಕ ಹನುಮಂತ ಅವರು ವಿಜಯಿಯಾಗಿದ್ದಾರೆ. ಭಾನುವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ನಿರೂಪಕ ನಟ ಸುದೀಪ್ ಅವರು ವಿಜೇತರನ್ನು ಘೋಷಣೆ ಮಾಡಿದರು.
ನಟ ಶಿವರಾಜ್ಕುಮಾರ್ ಅಮೆರಿಕದಲ್ಲಿ ಯಶಸ್ವಿಯಾಗಿ ಕ್ಯಾನ್ಸರ್ ಚಿಕಿತ್ಸೆ ಮುಗಿಸಿಕೊಂಡು ಭಾನುವಾರ ಬೆಂಗಳೂರಿಗೆ ವಾಪಸಾಗಿದ್ದಾರೆ.
ಪೈಲ್ವಾನ್’ ಚಿತ್ರಕ್ಕೆ ದೊರೆತಿದ್ದ 2019ನೇ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ. ‘ಬೇರೆ ಅರ್ಹ ಕಲಾವಿದರಿಗೆ ಕೊಡಿ. ಅರ್ಹರಲ್ಲೊಬ್ಬರಿಗೆ ಪ್ರಶಸ್ತಿ ಸಿಕ್ಕರೆ ನನಗೆ ಅದೇ ಸಂತೋಷ’ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಿದ್ದು, ‘ಮೋಹನದಾಸ’ ಚಲನಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ, ನಟ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಹಾಗೂ ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಿಸಲಾಗಿದೆ.
ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ರಜತ್ ಮತ್ತು ಅವರ ಮಾಜಿ ಗೆಳತಿಯ ವೈಯಕ್ತಿಕ ಫೋಟೋಗಳನ್ನು ಅಪರಿಚಿತರು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದು, ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆಂದು ಆರೋಪಿಸಿ ರಜತ್ರ ಪತ್ನಿ ಅಕ್ಷಿತಾ ಅವರು ದೂರು ನೀಡಿದ್ದಾರೆ.