ಉತ್ಸವ್ ಗೊನವಾರ ನಿರ್ದೇಶನದ ಫೋಟೋ ಮಾರ್ಚ್ 15 ರಿಂದ ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಬಹುಭಾಷಾ ನಟ ಪ್ರಕಾಶ್ ರೈ ಅವರು ಈ ಚಿತ್ರದ ಬಿಡುಗಡೆಗೆ ನಿಂತಿದ್ದು, ಸಿನಿಮಾ ತೆರೆ ಕಾಣುತ್ತಿರುವ ಹೊತ್ತಿನಲ್ಲಿ ಚಿತ್ರದ ನಿರ್ದೇಶಕ ಉತ್ಸವ್ ಗೊನವಾರ ಅವರ ಮಾತುಗಳು ಇಲ್ಲಿವೆ.