ಸಿಐಎಸ್ಎಫ್ಗೆ ಸರ್ಕಾರದಿಂದ 2 ಹೊಸ ಬೆಟಾಲಿಯನ್ ಮಂಜೂರುವಿಮಾನ ನಿಲ್ದಾಣ, ಅಣು ವಿದ್ಯುತ್ ಕೇಂದ್ರ ಸೇರಿದಂತೆ ಪ್ರಮುಖ ಪ್ರದೇಶಗಳ ಭದ್ರತೆ ನೋಡಿಕೊಳ್ಳುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಗೆ 2000 ಸಿಬ್ಬಂದಿಯನ್ನೊಳಗೊಂಡ 2 ಹೊಸ ಬೆಟಾಲಿಯನ್ಗಳನ್ನು ಸೃಷ್ಟಿಸಲು ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ, ಸಿಐಎಸ್ಎಫ್ ಸಿಬ್ಬಂದಿಯ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಲಿದೆ.