ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಶೇ.50ರಷ್ಟು ತೆರಿಗೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ದೇಶೀಯ ರಫ್ತುದಾರರಿಗೆ ನೆರವು ನೀಡಲು ವಿವಿಧ ಯೋಜನೆ ಜಾರಿ ಕುರಿತು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಭಾರತೀಯ ವಸ್ತುಗಳ ರಫ್ತಿನ ಮೇಲೆ ಈಗಾಗಲೇ ಅಮೆರಿಕ ಹೇರಿರುವ ತೆರಿಗೆಯು ತಕ್ಷಣಕ್ಕೆ ಹೇಳಿಕೊಳ್ಳುವಂಥ ಪರಿಣಾಮ ಬೀರದೇ ಇರಬಹುದು. ಆದರೆ, ಹೆಚ್ಚುವರಿ ಶೇ.25ರ ತೆರಿಗೆಯು ದೇಶದ ಅರ್ಥ ವ್ಯವಸ್ಥೆಯಲ್ಲಿ ಸವಾಲುಗಳನ್ನು ಸೃಷ್ಟಿಸಲಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ
ಪಿತೃಗಳಿಗೆ ಪಿಂಡಪ್ರದಾನ ಮಾಡುವ ಹಿಂದೂಗಳ ಪವಿತ್ರ ಪಿತೃಪಕ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಸೆ.6ರಿಂದ 21ರವರೆಗೆ ಗಯಾಜಿ (ಈ ಹಿಂದಿನ ಗಯಾ)ಯಲ್ಲಿ ಇ-ಪಿಂಡದಾನ ಸೇವೆ ಆರಂಭಿಸಲಾಗಿದೆ. ಬಿಹಾರದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಬಿಎಸ್ಟಿಡಿಸಿ) ಈ ಯೋಜನೆ ಘೋಷಿಸಿದೆ.