ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ 1.86 ಲಕ್ಷ ಕೋಟಿ ರು.ನಷ್ಟು ಜಿಎಸ್ಟಿ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.6.5ರಷ್ಟು ಹೆಚ್ಚಾಗಿದೆ. ಇನ್ನು ಕಳೆದ ವರ್ಷದ ಆಗಸ್ಟ್ಗೆ ಹೋಲಿಸಿದರೆ ಶೇ.10ರಷ್ಟು ಏರಿಕೆ ದಾಖಲಿಸಿರುವ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಚೀನಾ ತನ್ನ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ನಡುವೆಯೇ, ಭಾರತವೂ ಸಾಗರದೊಳಗೆ ಯುದ್ಧ ಸಾಮರ್ಥ್ಯ ವೃದ್ಧಿಗೆ ಮುಂದಾಗಿದ್ದು ಮುಂದಿನ ವರ್ಷ ಅಂದಾಜು 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಎರಡು ಜಲಾಂತರ್ಗಾಮಿ ಖರೀದಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.
‘ಭಾರತದ ಮೇಲೆ ಟ್ರಂಪ್ ವಿಧಿಸುತ್ತಿರುವ ತೆರಿಗೆಯು ಅಗೌರವಯುತ ಮತ್ತು ಅಜ್ಞಾನಯುತ ನೀತಿಯಾಗಿದೆ. ಭಾರತ ದೊಡ್ಡ ಹುಡುಗ, ಶಾಲಾ ಬಾಲಕನಲ್ಲ’ ಎಂದು ಸ್ವತಃ ಅಮೆರಿಕದ ಪತ್ರಕರ್ತ ರಿಕ್ ಸ್ಯಾಂಚೆಜ್ ಎಚ್ಚರಿಸಿದ್ದಾರೆ.