ಮತ್ತೆ ಭಾರತದ ವಿರುದ್ಧ ಸಿಡಿದೆದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಭಾರತ ಅಮೆರಿಕದ ಮೇಲಿನ ತೆರಿಗೆಯನ್ನು ಶೂನ್ಯಕ್ಕಿಳಿಸುವ ಆಫರ್ ನೀಡಿದೆ. ಆದರೆ ಸಮಯ ಮೀರಿಹೋಗುತ್ತಿದೆ. ವರ್ಷಗಳ ಮೊದಲೇ ಭಾರತ ಈ ಕೆಲಸ ಮಾಡಬೇಕಿತ್ತು’ ಎಂದು ಗುಡುಗಿದ್ದಾರೆ.
ಚಿನ್ನ ಮತ್ತು ಬೆಳ್ಳಿ ದರಗಳು ದಾಖಲೆ ಮಟ್ಟ ತಲುಪಿವೆ. ಬೆಂಗಳೂರಿನಲ್ಲಿ ಸೋಮವಾರ ಚಿನ್ನದ ದರ 10 ಗ್ರಾಂಗೆ ದಾಖಲೆಯ 1,10,000 ರು.ಗೆ ತಲುಪಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 1,32,100 ರು. ತಲುಪಿದೆ. ಶನಿವಾರ ಚಿನ್ನದ ಬೆಲೆ 1.08 ಲಕ್ಷ ರು. ಮತ್ತು ಬೆಳ್ಳಿಯ ಬೆಲೆ 1,28,000 ರು.ನಷ್ಟು ಇತ್ತು.
ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚುವರಿ ತೆರಿಗೆ ಹೇರಿದ ಬೆನ್ನಲ್ಲೇ ಇಲ್ಲಿ ನಡೆಯುತ್ತಿರುವ ಶಾಂಘೈ ಶೃಂಗದ ವೇಳೆ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಭಾರತದ ಪ್ರಧಾನಿ ಮೋದಿ 50 ನಿಮಿಷ ಸೀಕ್ರೆಟ್ ಕಾರ್ ಟೂರ್ ನಡೆಸುವ ಮೂಲಕ ಭಾರೀ ಕುತೂಹಲ ಮೂಡಿಸಿದ್ದಾರೆ.
ಟ್ರಂಪ್ರ ವ್ಯಾಪಾರ ನೀತಿ ಸಲಹೆಗಾರ ಪೀಟರ್ ನವರೋ ಅವರು ಮತ್ತೆ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಾರಿ ಅವರು ರಷ್ಯಾ ತೈಲ ಖರೀದಿಯಿಂದ ಇಡೀ ದೇಶ ನಷ್ಟ ಅನುಭವಿಸುತ್ತಿದ್ದರೆ, ಬ್ರಾಹ್ಮಣ ರಷ್ಟೇ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದ್ದಾರೆ.