ವಾಣಿಜ್ಯ ನಗರಿ ಮುಂಬೈನಲ್ಲಿ ಶನಿವಾರದ ಅನಂತ ಚತುರ್ದಶಿ ದಿನ ಗಣೇಶ ವಿಸರ್ಜನೆಗೆ ತಯಾರಿ ನಡೆಯುತ್ತಿರುವ ಹೊತ್ತಲ್ಲಿಯೇ ‘14 ಉಗ್ರರು ,400 ಕೇಜಿ ಆರ್ಡಿಎಕ್ಸ್ ಜತೆ ಮುಂಬೈ ದಾಳಿಗೆ ಸಿದ್ಧತೆ ಸಿದ್ಧತೆ ನಡೆಸಿದ್ದಾರೆ’ ಎಂದು ಸಂಚಾರಿ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಸಂದೇಶ ಬಂದಿದೆ
ಪ್ರೊ ಕಬಡ್ಡಿ 12ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಲು ಬೆಂಗಳೂರು ಬುಲ್ಸ್ ಸತತ 3ನೇ ಪಂದ್ಯದಲ್ಲೂ ವಿಫಲವಾಗಿದೆ. ಯು-ಮುಂಬಾ ವಿರುದ್ಧದ ಪಂದ್ಯದಲ್ಲಿ 28-48 ಅಂಕಗಳ ಹೀನಾಯ ಸೋಲಿನಿಂದಿಗೆ ಈ ಆವೃತ್ತಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಮೊದಲ ತಂಡ ಎನ್ನುವ ಅಪಖ್ಯಾತಿಗೆ ಗುರಿಯಾಯಿತು.
ಸಕ್ಕರೆಯ ಒಟ್ಟು ಉತ್ಪಾದನೆ ಪೈಕಿ ಶೇ.20ರಷ್ಟನ್ನು ಭಾರತದಲ್ಲಿ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಜವಳಿ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.