₹1 ಲಕ್ಷ ಗಡಿ ದಾಟಿದ ಚಿನ್ನದ ಬೆಲೆ!ಚಿನ್ನದ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, 10 ಗ್ರಾಂ ಚಿನ್ನದ ದರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 1800 ರು. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ದರ ₹1 ಲಕ್ಷದ ಗಡಿ ದಾಟಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ. ಬೆಂಗಳೂರಲ್ಲೂ 1 ಲಕ್ಷ ರು. ದಾಟಿದ್ದು, 99.5 ಶುದ್ಧತೆಯ ಚಿನ್ನದ ದರ 1,05,000 ರು.ಗೆ ಏರಿದೆ.