ಕೆಂಪುಕೋಟೆಯಲ್ಲಿ ಚಿನ್ನದ ಕಳಶ ಕದ್ದವ ಪೊಲೀಸ್ ಬಲೆಗೆ: ಕಳಶ ಮರುವಶಕಳೆದ ವಾರ ಕೆಂಪುಕೋಟೆಯಲ್ಲಿ ಜೈನ ಸಮುದಾಯದ ಕಾರ್ಯಕ್ರಮ ನಡೆವ ವೇಳೆ ಕೋಟಿ ರು. ಮೌಲ್ಯದ ಚಿನ್ನದ ಕಳಶವನ್ನು ಕದ್ದಿದ್ದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. 760 ಗ್ರಾಂ ಚಿನ್ನ, 150 ಗ್ರಾಂ ವಜ್ರ, ರತ್ನಗಳಿಂದ ಮಾಡಲ್ಪಟ್ಟ 1 ಕೋಟಿ ರು. ಮೌಲ್ಯದ ಕಳಶವನ್ನು ಪೊಲೀಸರು ಮರುವಶಪಡಿಸಿಕೊಂಡಿದ್ದಾರೆ.