ಚಿನ್ನದ ದರ ಏರಿಕೆ ಪರ್ವ ಮುಂದುವರೆದಿದ್ದು, ಸೋಮವಾರ ಒಂದೇ ದಿನ 10 ಗ್ರಾಂ ಚಿನ್ನದ ದರದಲ್ಲಿ ಭರ್ಜರಿ 2430 ರು.ನಷ್ಟು ಏರಿಕೆಯಾಗಿದೆ. ಪರಿಣಾಮ ದೆಹಲಿ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ದಾಖಲೆಯ 88,500 ರು.ಗೆ ತಲುಪಿದೆ.
ಪರೀಕ್ಷೆಯೇ ಬದುಕು ಅಲ್ಲ. ವಿದ್ಯಾರ್ಥಿಗಳು ತಮಗೆ ತಾವೇ ಸವಾಲು ಹಾಕಿಕೊಳ್ಳಬೇಕು, ಹಿಂದಿನ ಪರೀಕ್ಷೆಗಿಂತ ಮುಂದಿನ ಬಾರಿ ಉತ್ತಮ ಸಾಧನೆಗೆ ಪ್ರಯತ್ನಿಸಬೇಕು. ನಾಯಕನಾದವನ ಕೆಲಸ ಇನ್ನೊಬ್ಬರ ತಪ್ಪನ್ನು ತಿದ್ದುವುದಲ್ಲ, ತನ್ನನ್ನು ತಾನು ಇತರರಿಗೆ ಮಾದರಿಯನ್ನಾಗಿ ಮಾಡುವುದು!
ಛತ್ತೀಸ್ಗಢದಲ್ಲಿ ಕೆಂಪು ಉಗ್ರರ ವಿರುದ್ಧ ಕಾರ್ಯಾ ಚರಣೆಯನ್ನು ಭರ್ಜರಿಯಾಗಿ ಮುಂದುವರೆಸಿರುವ ಭದ್ರತಾಪಡೆಗಳು, ಭಾನುವಾರ ಬೆಳ್ಳಂಬೆಳಗ್ಗೆ 31 ನಕ್ಸಲರನ್ನು ಹೊಡೆದುರುಳಿಸಿದ್ದಾರೆ.
ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂಬ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬೇಡಿಕೆ ಸರಿಯಲ್ಲ. ತೆರಿಗೆಯಲ್ಲಿ ಪಾಲಿಗೆ ಅನುಗುಣವಾಗಿ ತಮಗೆ ಪಾಲು ಸಿಗಬೇಕು ಎನ್ನುವ ಚಿಂತನೆಯೇ ಸಂಕುಚಿನ ಮನೋಭಾವದ್ದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿವಾದಿತ ಹೇಳಿಕೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲುಂಡರೂ ನಿರ್ಗಮಿತ ಸಿಎಂ ಆತಿಶಿ ಸಿಂಗ್ ಕಾಲ್ಕಾಜಿ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಫೆ.10ರಂದು ನವದೆಹಲಿಯಲ್ಲಿ ನಡೆಯಲಿದೆ.
27 ವರ್ಷಗಳ ಬಳಿಕ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ವಿಜಯಪತಾಕೆ ಹಾರಿಸಿರುವ ಬಿಜೆಪಿ, ಸರ್ಕಾರ ರಚನೆ ಮತ್ತು ತನ್ನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ.