ವಕ್ಫ್ ಸಭೆ ವೇಳೆ ಹೈಡ್ರಾಮಾ: ಗ್ಲಾಸ್ ಒಡೆದು ಪೀಠದತ್ತ ಎಸೆದ ಬ್ಯಾನರ್ಜಿ!ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸದನ ಸಮಿತಿ ಸಭೆಯಲ್ಲಿ ಮಂಗಳವಾರ ಹೈಡ್ರಾಮಾ ನಡೆದಿದ್ದು, ಸಭೆ ವೇಳೆ ಬಿಜೆಪಿ ಸದಸ್ಯನ ಮಾತಿನಿಂದ ಕೋಪಗೊಂಡ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ, ಅಲ್ಲೇ ಇದ್ದ ಗಾಜಿನ ಲೋಟ ಒಡೆದು ಅದನ್ನು ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರತ್ತ ಎಸೆದ ಪ್ರಸಂಗ ನಡೆದಿದೆ.