ಆಂಧ್ರದಲ್ಲಿ ತೆಲುಗುದೇಶಂ ಗೆದ್ದರೆ ಬಡವರಿಗೆ ಫ್ರೀ ಸೈಟ್!ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ. 59 ವರ್ಷದೊಳಗಿನ ಮಹಿಳೆಯರಿಗೆ ಮಾಸಿಕ ₹1500. ಪ್ರತಿ ಕುಟುಂಬಕ್ಕೆ ವಾರ್ಷಿಕ 3 ಗ್ಯಾಸ್ ಸಿಲಿಂಡರ್. ರೈತರಿಗೆ ವಾರ್ಷಿಕ 20 ಸಾವಿರ ರುಪಾಯಿ ನೆರವು. ಬಡವರಿಗೆ ನಿವೇಶನದ ಜತೆ ಮರಳು ಕೂಡ ವಿತರಣೆ. ವಾಸಿಸುವವನೇ ಭೂಮಿಯ ಒಡೆಯ ಕಾಯ್ದೆ ರದ್ದು ಮಾಡಲಾಗುವುದು ಎಂದು ವಿಧಾನಸಭೆ ಚುನಾವಣೆಗೆ ಟಿಡಿಪಿ-ಜನಸೇನಾ-ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿವೆ.