ಆರ್ಆರ್ಆರ್ ಹೆಮ್ಮೆ, ಆರ್ಆರ್ ನಾಚಿಕೆಗೇಡು: ಮೋದಿ ಕಾಂಗ್ರೆಸ್ ವಿರುದ್ಧ ದಿನಕ್ಕೊಂದು ಹೊಸ ಆರೋಪ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶಕ್ಕೆ ತೆಲುಗಿನ ಆರ್ಆರ್ಆರ್ ಸಿನಿಮಾ ಹೆಮ್ಮೆ ತಂದರೆ, ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ‘ಆರ್ಆರ್ ತೆರಿಗೆ’ ವಸೂಲಿ ಮೂಲಕ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.