ಬೀಳಗಿಯಲ್ಲಿ 21, 22 ರಂದು ನಗೆ ನಾಟಕ ಪ್ರದರ್ಶನಪ್ರಖ್ಯಾತ ನಗೆ ನಾಟಕಗಳ ಮೂಲಕವೇ ಕನ್ನಡ ನಾಡಿನಾದ್ಯಂತ ಖ್ಯಾತಿ ಪಡೆದಿರುವ, ಹುಬ್ಬಳ್ಳಿಯ ಗುರು ಇನ್ಸಿಟ್ಯೂಟ್ ತಂಡ ಹಾಗೂ ಬೀಳಗಿಯ ಸಿದ್ಧೇಶ್ವರ ವಿದ್ಯಾವರ್ದಕ ಸಂಘದ 1983-84ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸಹಯೋಗದಲ್ಲಿ ಸೆಪ್ಟೆಂಬರ್ 21 ರಂದು ಸೂಪರ ಸಂಸಾರ ಮತ್ತು 22 ರಂದು ''''ಸಹಿ ರೀ ಸಹಿ'''' ಎಂಬ ಎರಡು ಹಾಸ್ಯ ನಾಟಕಗಳ ಪ್ರದರ್ಶನವನ್ನು ಸಂಜೆ 6:30 ರಿಂದ ರಾತ್ರಿ 10 ಗಂಟೆಯವರೆಗೆ ಬೀಳಗಿಯ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಗುರು ಇನಸ್ಟಿಟ್ಯೂಟ್ ಮುಖ್ಯಸ್ಥ ಡಾ.ಯಶವಂತ ಸರದೇಶಪಾಂಡೆ ತಿಳಿಸಿದ್ದಾರೆ.