ಸಿಮಿಕೇರಿಯಲ್ಲಿ ವೈಭವದ ಆಂಜನೇಯನ ಓಕಳಿಕನ್ನಡಪ್ರಭ ವಾರ್ತೆ ಬಾಗಲಕೋಟೆ ಸಮೀಪದ ಸಿಮಿಕೇರಿ ಗ್ರಾಮದಲ್ಲಿ 28 ವರ್ಷದ ಬಳಿಕ ಆಂಜನೇಯನ ಓಕಳಿ 28 ವರ್ಷದ ಬಳಿಕ ಸಂಭ್ರಮದ ಜರುಗಿ ಗತವೈಭವಕ್ಕೆ ಸಾಕ್ಷಿಯಾಯಿತು. ಗ್ರಾಮದಲ್ಲಿ ಗ್ರಾಮ ದೇವತೆಯ ಉಡಿ ತುಂಬುವ ಕಾರ್ಯಕ್ರಮ ಹಾಗೂ ಹನುಮಂತ ದೇವರ ಓಕುಳಿ ಉತ್ಸವ ಅಂಗವಾಗಿ ಬೆಳಗಿನ ಜಾವ ಆಂಜನೇಯನಿಗೆ ಪಂಚಾಮೃತ ಅಭಿಷೇಕ, ಎಲಿ ಪೂಜೆ, ಶ್ರೀರಾಮನಾಮ ಜಪ, ಹನುಮಾನ್ ಚಾಲೀಸ್ ಪಠಣ, ಪುಷ್ಪಾಲಂಕಾರ, ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜಾ ಕೈಕಂರ್ಯಗಳು ಜರುಗಿದವು.