ಯುವಕರಲ್ಲಿ ಸ್ಪಷ್ಟತೆಯ ಕೊರತೆಇಂದಿನ ಯುವಜನತೆಯಲ್ಲಿ ಸ್ಪಷ್ಟತೆಯ ಗುರಿ, ಛಲ ಇಲ್ಲದಿರುವುದು ಎದ್ದು ಕಾಣುತ್ತಿದೆ. ಈ ಅಂಶ ಗಮನಿಸಿದರೆ ಬಾಲಕರಿಗಿಂತ ಬಾಲಕೀಯರೇ ಬಹುಪಾಲು ಉತ್ತಮ. ಅವರಲ್ಲಿ ಸ್ವಲ್ಪಮಟ್ಟಿಗಾದರೂ ಗುರಿ ಸಾಧಿಸುವ ನಿಟ್ಟಿನಲ್ಲಿ ಕಲಿಕಾ ಓದು, ಅಭ್ಯಾಸದ ಅಭಿರುಚಿ ಪ್ರಯತ್ನ ಇದೆ ಎಂದು ಹಳಿಯಾಳ ತಾಲೂಕಿನ ಮರ್ಕವಾಡದ ಸುಕೃತಿ ವಿದ್ಯಾರ್ಥಿಗಳ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಅಕಾಡೆಮಿ ಉಸ್ತುವಾರಿ ಅನೀಲ ನಾಯ್ಕ ಹೇಳಿದರು.