ಕಸದ ರಾಶಿಯಲ್ಲಿ ನವಜಾತ ಶಿಶುವಿನ ಕಳೆಬರ ಪತ್ತೆಕನ್ನಡಪ್ರಭ ವಾರ್ತೆ ಬಾಗಲಕೋಟೆಜಿಲ್ಲೆಯ ಮಹಲಿಂಗಪುರದಲ್ಲಿ ಬೆಳಕಿಗೆ ಬಂದಿರುವ ಗರ್ಭಪಾತ ಪ್ರಕರಣ ಮಾಸುವ ಮುನ್ನವೇ ಕಸದ ರಾಶಿಯೊಂದರಲ್ಲಿ ನವಜಾತ ಶಿಶುವಿನ ಕಳೆಬರಹವೊಂದು ಪತ್ತೆಯಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ನಗರದ ಕಸ ವಿಲೇವಾರಿ ಘಟಕದಲ್ಲಿ ಕಸದ ರಾಶಿ ಬೇರ್ಪಡಿಸುವ ವೇಳೆ ನವಜಾತ ಶಿಶುವಿನ ಕಳೆಬರ ಪತ್ತೆಯಾಗಿದೆ. ನಗರದ ಹೊರ ವಲಯದಲ್ಲಿರುವ ಮಲ್ಲಾಪೂರ ರಸ್ತೆಯಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಇದು ಪತ್ತೆಯಾಗಿದೆ.