ಸೊಳ್ಳೆ ನಿಯಂತ್ರಣ ಡೆಂಘೀ ತಡೆಗೆ ಮಾರ್ಗ: ರೇಷ್ಮಾಕನ್ನಡಪ್ರಭ ವಾರ್ತೆ ಲೋಕಾಪುರ ಡೆಂಘೀ ಜ್ವರ ಸೊಳ್ಳೆಯಿಂದ ಹರಡುವ ಖಾಯಿಲೆಯಾಗಿದ್ದು, ಇದು ಪ್ರಪಂಚದ ಉಷ್ಣವಲಯದಲ್ಲಿ ಕಂಡು ಬರುತ್ತದೆ ಎಂದು ವಿಜ್ಞಾನ ಶಿಕ್ಷಕಿ ರೇಷ್ಮಾ ಎಸ್ ಕಲಹಾಳ ಹೇಳಿದರು. ಹೆಬ್ಬಾಳದ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದ ಡೆಂಘೀ ಜ್ವರದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಪ್ರಕರಣಗಳು ಸಂಭವಿಸುತ್ತವೆ, ಡೆಂಘೀ ಲಸಿಕೆಗಳ ಮೇಲೆ ಸಂಶೋಧನೆ ಮಾಡುತ್ತಿದ್ದಾರೆ.