• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಳೆ ಕ್ಷೀಣಿಸಿದ್ರೂ, ತಗ್ಗದ ಪ್ರವಾಹ!
ಕೃಷ್ಣಾ ಕಣಿವೆ ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದ್ದರೂ ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ, ಹಳಿಂಗಳಿ, ಆಸ್ಕಿ, ಕುಲಹಳ್ಳಿ ನದಿ ಪಾತ್ರದಲ್ಲಿ ಮಂಗಳವಾರ ಅರ್ಧ ಅಡಿ ನದಿಪಾತ್ರದ ನೀರಿನಮಟ್ಟ ಏರಿಕೆಯಾಗಿದೆ. ಆದರೆ, ಪ್ರವಾಹ ಯಥಾಸ್ಥಿತಿಯಲ್ಲಿದೆ.
ನಿಮ್ಮ ಕಾಲಿಗೆ ಬೀಳ್ತಿವ್ರಿ ಶಾಶ್ವತ ಸೂರು ಕೊಡ್ರಿ
ಸಾಹೇಬ್ರ, ನಿಮ್ಗ ಕಾಲು ಬೀಳ್ತಿವ್ರಿ. ನಮ್ಗ ಶಾಶ್ವತ ಪರಿಹಾರ ಒದಗಿಸಿಕೊಡ್ರಿ. 20 ವರ್ಷಗಳಿಂದ ನಮ್ಮ ಬಾಳೇ ನೀರಾಗ ಮುಳಗೈತ್ರಿ. ಪ್ರತಿವರ್ಷ ಪ್ರವಾಹ ಬಂದಾಗ ನಿಮ್ಮಂತ ಮಂತ್ರಿಗಳು ಬಂದು ನಮ್ಮ ಗೋಳು ಕೇಳಿ ಹೋಗ್ತಾರು. ಅವರೇನು ಮಾಡಲಿಲ್ಲ. ನೀವಾದ್ರೂ ನಮ್ಗೊಂದು ಶಾಶ್ವತ ಸೂರು ನೀಡಿ ಪುಣ್ಯಕಟ್ಟಿಕೊಳ್ರಿ ಎಂದು ಸಂತ್ರಸ್ತರು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಎದುರು ಕೈ ಮುಗಿದು ಕಣ್ಣೀರು ಹಾಕಿದರು.
ಮಹಾ ಮಳೆಗೆ ಬೆಳೆ ನೀರು ಪಾಲು
ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಕಡಿಮೆ ಆಗಿದೆ. ಆದರೂ ಘಟಪ್ರಭಾ ನದಿಗೆ ೪೩,೭೫೪ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕಂದಾಯ, ಪೊಲೀಸ್ ಇಲಾಖೆ ಸೇರಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಈಗಾಗಲೇ ನದಿ ನೀರು ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾಗಿ ಅನ್ನದಾತರನ್ನು ಕಂಗಾಲಾಗಿಸಿದೆ.
ಬಾಡಗಂಡಿಯಲ್ಲಿ ವೈದ್ಯಕೀಯ ಕ್ರಾಂತಿ
ಭೂಮಿ ಮೇಲೆ ಜನ್ಮಕೊಟ್ಟ ತಂದೆ-ತಾಯಿ ಹಾಗೂ ಹುಟ್ಟೂರಿನ ಋಣ ತೀರಿಸಲು ಸಾಧ್ಯವೇ ಇಲ್ಲ ಎನ್ನುವ ಶಾಸ್ತ್ರ-ಪುರಾಣಗಳ ವೇದವಾಕ್ಯವನ್ನೇ ಸುಳ್ಳು ಎನ್ನುವುದನ್ನು ಸಾಧಿಸಿ ತೋರಿಸಿದವರು ಮಾಜಿ ಸಚಿವ ಎಸ್.ಆರ್.ಪಾಟೀಲರು.
ಮುಧೋಳದಲ್ಲಿ ಘಟಪ್ರಭ ಅವಾಂತರ
ಕನ್ನಡಪ್ರಭ ವಾರ್ತೆ ಮುಧೋಳ ಮುಧೋಳ ತಾಲೂಕಿನಲ್ಲಿ ಘಟಪ್ರಭಾ ನದಿಯ ಆರ್ಭಟ ಮುಂದುವರಿದಿದ್ದು, ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿವೆ. ಸೇತುವೆ ಜಲಾವೃತವಾಗಿ ಪ್ರಮುಖ ನಗರಗಳ ರಸ್ತೆ ಸಂಚಾರವೇ ಬಂದ್‌ ಆದಂತಾಗಿದ್ದು, ನದಿಪಾತ್ರದಲ್ಲಿನ ಜಮೀನುಗಳು ಸಂಪೂರ್ಣ ಜಲಾವೃತವಾಗಿವೆ. ಹಿಡಕಲ್ ಜಲಾಶಯದಿಂದ ಘಟಪ್ರಭ ನದಿಗೆ ಸೋಮವಾರವೂ ಹೆಚ್ಚಿನ ನೀರು ಬಿಟ್ಟಿದ್ದು, ಇನ್ನೇರಡು ದಿನಗಳಲ್ಲಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.
ಸೇವೆ ಮಾಡಲು ಹೃದಯವಂತಿಕೆ ಬೇಕು
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)ಅಂಕ ಆಧಾರಿತ ಶಿಕ್ಷಣದಿಂದ ಹೊರಬಂದು ಜ್ಞಾನಾಧರಿತ ಶಿಕ್ಷಣ ಪಡೆಯುವುದು ಇಂದಿನ ದಿನಗಳಲ್ಲಿ ಶಿಕ್ಷಣದ ಗುರಿಯಾಗಬೇಕು. ನಾವು ಕಲಿತ ವಿದ್ಯೆಯಿಂದ ಸೌಹಾರ್ದಯುತವಾಗಿ ಬದುಕುವುದೇ ನಿಜವಾದ ಶಿಕ್ಷಣ. ಹಣ ಮಾಡಲು ವ್ಯವಹಾರ ಜ್ಞಾನ ಬೇಕು, ಸೇವೆ ಮಾಡಲು ಹೃದಯವಂತಿಕೆ ಬೇಕು ಎಂದು ಹಿರಿಯ ಸಾಹಿತಿ, ಲಾವಣಿಕಾರ ಬಿ.ಆರ್.ಪೋಲಿಸ್ ಪಾಟೀಲ ಹೇಳಿದರು.
ರಬಕವಿ-ಬನಹಟ್ಟಿ ತಾಲೂಕಲ್ಲಿ ಪ್ರವಾಹ ಭೀತಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಸೋಮವಾರ ಸಂಜೆಯ ವೇಳೆಗೆ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳ ಜನರಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಸೋಮವಾರ ಬೆಳಗಿನಿಂದ ನದಿ ನೀರು ಇಳಿಯಬಹುದು ಎಂದು ತಾಲೂಕಿನ ಅಸ್ಕಿ, ಆಸಂಗಿ, ತಮದಡ್ಡಿ ಸೇರಿದಂತೆ ನದಿ ಪಾತ್ರದ ಜನ ಊಹಿಸಿದ್ದರು. ಆದರೆ ಬೆಳಗಿನಿಂದ ಒಂದು ಅಡಿಗೂ ಹೆಚ್ಚು ನೀರು ಏರಿಕೆಯಾಗಿದೆ ಎಂದು ಅಸ್ಕಿ ಗ್ರಾಮದ ತೋಟದ ನಿವಾಸಿ ಹಣಮಂತ ತಳವಾರ ಹೇಳಿದ್ದಾರೆ.
ಡಿಕೆಶಿ, ಯತ್ನಾಳ ಹೇಳಿಕೆಗೆ ವಕೀಲರ ಆಕ್ರೋಶ
ಕನ್ನಡಪ್ರಭ ವಾರ್ತೆ ಜಮಖಂಡಿ ವಕೀಲರು ಕಮೀಷನ್‌ ದಂಧೆ ಮಾಡುತ್ತಿಲ್ಲ, ಬದಲಾಗಿ ಬಡ ರೈತರಿಗೆ ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಜಮಖಂಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ದಾನಪ್ಪ ಜತ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ವಿಜಯಪುರ ನಗರ ಶಾಸಕ ಬಸವನಗೌಡ ಯತ್ನಾಳ ಅವರ ಹೇಳಿಕೆಯನ್ನು ವಿರೋಧಿಸಿ ಜಮಖಂಡಿ ಪಟ್ಟಣದ ವಕೀಲರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಆಕ್ರೋಶ ಹೊರಹಾಕಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಉಮಾಶ್ರೀ ಪರಿಶೀಲನೆ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಢವಳೇಶ್ವರ, ನಂದಗಾಂವ, ಮಿರ್ಜಿ ಸೇರಿ ಹಲವು ಗ್ರಾಮಗಳು ಘಟಪ್ರಭಾ ನದಿ ಪಾತ್ರಗಳ ಗ್ರಾಮ ಮತ್ತು ಪಟ್ಟಣಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಅವರು ನಂದಗಾಂವ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ಜಾಕ್‌ವೆಲ್ ರಸ್ತೆ ಸಂಪೂರ್ಣ ಜಲಾವೃತ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ರಬಕವಿ- ಬನಹಟ್ಟಿ ಜಾಕವೆಲ್‌ಗೆ ಹೋಗುವ ಮಾರ್ಗ ಮಧ್ಯದ ಜಾಕ್‌ವೆಲ್‌ ರಸ್ತೆ ಕೃಷ್ಣಾ ನದಿ ಪ್ರವಾಹದ ನೀರಿನಿಂದ ಸಂಪೂರ್ಣ ಬಂದ್ ಆಗಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಪಿಐ ಸಂಜಯ ಬಳಿಗಾರ ಆದೇಶದ ಮೇರೆಗೆ ನದಿ ಪಾತ್ರದ ಅನೇಕ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.
  • < previous
  • 1
  • ...
  • 187
  • 188
  • 189
  • 190
  • 191
  • 192
  • 193
  • 194
  • 195
  • ...
  • 379
  • next >
Top Stories
ನಮ್ಮ ದಾಂಪತ್ಯವನ್ನು ಪುನರ್‌ ನಿರ್ಮಿಸುತ್ತೇವೆ : ಅಜಯ್‌ ರಾವ್ ಪತ್ನಿ
ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಐಪಿಎಲ್‌ಗೆ ಸಜ್ಜಾಗುತ್ತಿರುವ ಕರ್ನಾಟಕದ ಕ್ರಿಕೆಟಿಗರು
ಸಿನಿಮಾ ಗೆಲ್ಲಲು ಸ್ಟಾರ್ ಬೇಕಿಲ್ಲ : ರಮ್ಯಾ
ದೇವಾಲಯಗಳ ಮೇಲೆ ಮೂಲಭೂತವಾದಿಗಳ ದಾಳಿ !
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved