ಮಹಿಳೆಯರಿಂದ ನಡೆದ ಬನಶಂಕರಿದೇವಿ ರಥೋತ್ಸವಇಳಕಲ್ಲ: ದೇವಾಂಗ ಸಮಾಜದ ಕುಲದೇವತೆ ಆದಿಶಕ್ತಿ ಶ್ರೀ ಬನಶಂಕರಿದೇವಿ ಅವತರಿಸಿದ ದಿನದ ಅಂಗವಾಗಿ ನಗರದ ಸಾಲಪೇಟ, ಗುಬ್ಬಿಪೇಟ, ಮುನವಳ್ಳಿಪೇಟ ಹಾಗೂ ಕೊಪ್ಪರದ ಪೇಟ ಶೀ ಬನಶಂಕರಿ ದೇವಸ್ಥಾನಗಲ್ಲಿ ದೇವಿಗೆ ಬೆಳಿಗ್ಗೆ ಮಾವಿನ ಹಣ್ಣಿನ ಸೀಕರಣಿ ಅಭಿಷೇಕ, ಲಲಿತಾ ಬಳಗದ ತಾಯಂದಿರಿಂದ ಲಲಿತಾ ಸಹಸ್ರನಾಮ ಪಠಣ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.