ರಾಘಾಪೂರ ಗ್ರಾಮದಲ್ಲಿ ಭರಪೂರ ಸಮಸ್ಯೆಗಳು!ಪ್ರತಿ ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಗೆ ಬುನಾದಿ ಎಂಬ ಮಾತಿದೆ. ಇದಕ್ಕಾಗಿ ಸರ್ಕಾರ ಕೂಡ ನಗರ, ಮಹಾನಗರಗಳಂತೆ ಗ್ರಾಮಗಳಿಗೂ ಸಾಕಷ್ಟು ಅನುದಾನವನ್ನು ನೀಡುತ್ತಲೇ ಬಂದಿದೆ. ಇದೆ ಅನುದಾನವನ್ನು ಬಳಸಿಕೊಂಡು ಗ್ರಾಪಂಗಳು ಜನೋಪಯೋಗಿ ಕಾರ್ಯಗಳಿಗೆ ಮುಂದಾಗುತ್ತದೆ. ಅಲ್ಲದೆ, ಹತ್ತಾರು ಯೋಜನೆಗಳನ್ನು ಜಾರಿಯಾಗುತ್ತಿವೆ. ಆದರೆ, ತಾಲೂಕಿನ ಹಂಸನೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ರಾಘಾಪೂರ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಜನರು ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.