ಪು.2..ಸಣ್ಣ... ಕಾಮನ ಸೋಗಿನ ಮೆರವಣಿಗೆಅಮೀನಗಡ: ಪಟ್ಟಣದಲ್ಲಿ ಹೋಳಿಹಬ್ಬದ ನಿಮಿತ್ತ ಕುಂಬಾರ ಓಣಿಯ ಲಕ್ಷ್ಮೀಗುಡಿಯಲ್ಲಿ ರಾಮ, ಲಕ್ಷ್ಮಣ, ಸೀತಾಮಾತೆ ಸೋಗಿನಲ್ಲಿ ವೇಶಧಾರಿಗಳು ಜನಾಕರ್ಷಿಸಿದರು. ಕಳೆದ 50 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕುರುಹಿನಶೆಟ್ಟಿ ಸಮಾಜದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ರತಿ-ಮನ್ಮಥರ ಮೂರ್ತಿ ಪ್ರತಿವರ್ಷದಂತೆ ಈ ವರ್ಷವೂ ಕಣ್ಮನ ಸೆಳೆಯಿತು. ಹೋಳಿಹುಣ್ಣಿಗೆಮೆಗೆ ಈ ಭಾಗದಲ್ಲಿ ಓಕುಳಿ ನಿಷಿದ್ಧ. ಈ ಭಾಗದಲ್ಲಿ ಯುಗಾದಿ ಪಾಡ್ಯದ ನಂತರ ಎರಡು ದಿನಗಳು ಓಕುಳಿಯಾಡುವ ಸಂಪ್ರದಾಯವಿದೆ.