ಶಿಕ್ಷಕ ನಮ್ಮನ್ನು ಅಂಧಕಾರದಿಂದ ಹೊರತರುವ ದೈವಪ್ರಭೆರಬಕವಿ - ಬನಹಟ್ಟಿ: ಶಿಕ್ಷಕ ನಮ್ಮನ್ನು ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನತ್ತ ಕರೆದೊಯ್ಯುವ ದೈವಪ್ರಭೆ. ಶಿಕ್ಷಕ, ಶಿಷ್ಯರ ಅಭ್ಯುದಯ ಕಂಡು ಸಂತಸಪಡುವ ಏಕೈಕ ಮಹಾನ್ ವ್ಯಕ್ತಿ. ಶಿಕ್ಷಕ ಶ್ರೀಗಂಧದಂತೆ ತಮ್ಮ ಸೇವೆಯುದ್ದಕ್ಕೂ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪಣ ತೊಟ್ಟು ಅಹರ್ನಿಶಿ ಶ್ರಮಿಸುವ ದೇವದೂತನಿದ್ದಂತೆ ಎಂದು ಬಸವೇಶ್ವರ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಬಸವರಾಜ ಕಣಬೂರ ಹೇಳಿದರು.