ಶೆಟ್ಟರ್ ಜೊತೆ ಮೊದಲಿನಂತೆ ಇದ್ದೇವೆಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜೊತೆ ಮೊದಲು ಹೇಗಿದ್ದೇವೆಯೋ ಈಗಲೂ ಹಾಗೆ ಇದ್ದೇವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ನಗರದಲ್ಲಿ ಬುಧವಾರ ಜಗದೀಶ ಶೆಟ್ಟರ್ ಜೊತೆ ಗುರು ಶಿಷ್ಯ ಸಂಬಂಧ ಹೇಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಜಗದೀಶ್ ಶೆಟ್ಟರ್ ನಮ್ಮ ಹಿರಿಯರು. ಅವರು ಬೇರೆ ಪಕ್ಷದಲ್ಲಿದ್ದಾಗ ಬೇರೆ, ಈಗ ಬೇರೆ. ಈಗ ನಮ್ಮ ಪಕ್ಷದಲ್ಲಿಯೇ ಇದ್ದಾರೆ, ಅದರಲ್ಲೇನು ಸಮಸ್ಯೆ ಇಲ್ಲ ಎಂದರು.