• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ದೇವಸ್ಥಾನಕ್ಕೆ ಹೋಗಲು ಪಾದಚಾರಿ ಮಾರ್ಗ ನಿರ್ಮಿಸುವಂತೆ ಮನವಿ
ರೈಲ್ವೆ ಇಲಾಖೆ ಹುಬ್ಬಳ್ಳಿಯ ಜನರಲ್ ಮ್ಯಾನೇಜರ್‌ ಸಂಜೀವ ಕಿಶೋರ ಅವರಿಗೆ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಕಮೀಟಿ ವತಿಯಿಂದ ಮನವಿ ಸಲ್ಲಿಕೆ
ಸರ್ಕಾರಿ ಆಸ್ಪತ್ರೆಯಲ್ಲಿ ಲಿಪೋಮಾ ಯಶಸ್ವಿ ಶಸ್ತ್ರಚಿಕಿತ್ಸೆ
ಜಮಖಂಡಿ: ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಪವನ ಬಳ್ಳೂರ ಅಪರೂಪದ ಲಿಪೋಮಾ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರ ಚರ್ಮದೊಳಗಿನ ಗಡ್ಡೆಯನ್ನು ಪರೀಕ್ಷೆಗೆ ಒಳಪಡಿಸಿ ದೊಡ್ಡಗಾತ್ರದ ಲಿಪೋಮಾ ಗಡ್ಡೆಯನ್ನು ಸುಮಾರು 30 ರಿಂದ 45 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.
ತಾಲೂಕಿನಾದ್ಯಂತ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ
ಗುಳೇದಗುಡ್ಡ: ಪಟ್ಟಣದಲ್ಲಿ ಬುಧವಾರ ವಿಶ್ವಹಿಂದು ಪರಿಷತ್‌ ವತಿಯಿಂದ ಸಂಕೀರ್ತನ ಯಾತ್ರೆ ನಡೆಯಿತು. ವಿಶ್ವಹಿಂದು ಪರಿಷತ್‌ ಜಿಲ್ಲಾ ಕಾರ್ಯದರ್ಶಿ ಶಿವು ಮೇಲ್ನಾಡ ಮಾತನಾಡಿ, ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ದೇಶಾದ್ಯಂತ ಐದು ಲಕ್ಷ ಗ್ರಾಮ ಹಾಗೂ ನಗರಗಳ ಮನೆ ಮನೆಗೆ ಮಂತ್ರಾಕ್ಷತೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಗುಳೇದಗುಡ್ಡ ತಾಲೂಕಿನಾದ್ಯಂತ ನಮ್ಮ ಕಾರ್ಯಕರ್ತರು ಪ್ರತಿಮನೆ ಮನೆಗೂ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ನೀಡಿ, ಪ್ರಭು ಶ್ರೀರಾಮನ ದರ್ಶನಕ್ಕೆ ಆಹ್ವಾನಿಸಲಾಗಿದೆ ಎಂದರು.
ಜೀವಿಸಲು ಗಾಳಿ ನೀರಿನಂತೆ ಕಾನೂನು ಪಾಲನೆಯೂ ಅವಶ್ಯಕ: ದ್ಯಾವಪ್ಪ ಎಸ್.ಬಿ.
ಮಹಾಲಿಂಗಪುರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಾಗಲಕೋಟೆ, ತಾಲೂಕು ಕಾನೂನು ಸೇವಾ ಪ್ರಾಧಿಕಾರ ಬನಹಟ್ಟಿ ಹಾಗೂ ಸ್ಥಳೀಯ ಪೊಲೀಸ್ ಠಾಣೆ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್.ಸಿ.ಪಿ.ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಬುಧವಾರ ಕಾನೂನು ಅರಿವು-ನೆರವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ. ಮಾನವ ಜೀವಿಸಲು ಗಾಳಿ, ಆಹಾರ ಮತ್ತು ನೀರಿನಂತೆ ಕಾನೂನು ಪಾಲನೆ ಕೂಡಾ ಅವಶ್ಯಕ ಎಂದು ಹೇಳಿದರು.
ಸೈಕಲ್‌ನಲ್ಲಿ 11 ಜ್ಯೋತಿರ್ಲಿಂಗ ದರ್ಶನ ಮಾಡಿದ ಸಾಹಸಿ
ರಬಕವಿ-ಬನಹಟ್ಟಿ: ಒಬ್ಬಂಟಿಯಾಗಿ ಸೈಕಲ್ ಮೇಲೆ ಬರೋಬ್ಬರಿ 3200 ಕಿ.ಮೀ ಸಂಚರಿಸಿ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಅಪರೂಪದ ಸಾಹಸವನ್ನು ಬೆಳಗಾವಿ ಜಿಲ್ಲೆಯ ಪಾಲಬಾಂವಿ ಗ್ರಾಮದ ಸುರೇಶ ಅಲ್ಲಪ್ಪ ಕಡಪಟ್ಟಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದ ಮೂಕಾಂಬಿಕಾ ದೇವಿ ಸನ್ನಿಧಿಯಿಂದ ಮಹಾಲಯ ಅಮಾವಾಸ್ಯೆಗೂ ಸೈಕಲ್ ಯಾತ್ರೆ ಆರಂಭಿಸಿ ಮುಂಬೈ, ನಾಸಿಕ್‌, ಗುಜರಾತ, ರಾಜಸ್ಥಾನ, ಬನಾರಸ್ ಮಾರ್ಗವಾಗಿ ಕಾಶಿ ತಲುಪಿ ಅಲ್ಲಿ ವಿಶ್ವನಾಥನಿಗೆ ಅಭಿಷೇಕ ಮಾಡಿಸಿ ಅಲ್ಲಿಂದ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ದಾರೆ. ಪ್ರಯಾಣದುದ್ದಕ್ಕೂ ದಿನಕ್ಕೆರಡು ಬಾಳೆಹಣ್ಣು ಹಾಗೂ ಒಂದು ಗ್ಲಾಸ್ ಹಾಲು ಸೇವಿಸಿ 45 ದಿನಗಳ ಕಾಲ ಪ್ರತಿದಿನ 180 ಕಿ.ಮೀ ದೂರವನ್ನು ಸೈಕಲ್ ತುಳಿಯುವ ಮೂಲಕ ಕ್ರಮಿಸಿ ಪ್ರಯಾಣ ಮುಗಿಸಿದ್ದಾರೆ.
ಭೋವಿ ಸಮಾಜದಿಂದ ಸಿದ್ಧರಾಮೆಶ್ವರ ಜಯಂತಿ ಆಚರಣೆ
ಮಹಾಲಿಂಗಪುರ: ಪಟ್ಟಣದ ಭೋವಿ ವಡ್ಡರ ಸಮಾಜದ ವತಿಯಿಂದ ಸೋಮವಾರ ಸಮಾಜದ ಸಮುದಾಯ ಭವನದ ಮುಂಭಾಗದಲ್ಲಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಅರ್ಜುನ ಬಂಡಿವಡ್ಡರ, ರಾಮು ಬಂದಿವಡ್ಡರ, ಮೀರಾ ನದಾಫ್, ರಂಜಾನ್ ಪಿಂಜಾರ್, ಹಸನ್‌ ಸಾಬ್‌ ನದಾಫ್, ಮಾರುತಿ ಬಂಡಿವಡ್ಡರ ಇತರರು ಇದ್ದರು.
ದರ್ಗಾದಲ್ಲಿನ ಹುಂಡಿ ಹಣ ಕಳ್ಳತನ ಆರೋಪ
ಇಳಕಲ್ಲ: ನಗರದ ಮುರ್ತುಜಾ ಖಾದ್ರಿ ದರ್ಗಾದಲ್ಲಿನ ಹುಂಡಿಯ ಹಣ ಮತ್ತು ಚಿನ್ನ, ಬೆಳ್ಳಿ ಕಳ್ಳತನ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ರಿಯಾಜ್‌ ಬನ್ನು ಬಾಗಲಕೋಟೆ ಜಿಲ್ಲಾ ವಕ್ಫ್ ಸಮಿತಿಗೆ ದೂರು ನೀಡಿದ್ದಾರೆ. ಸಮಿತಿಗೆ ನಾನೇ ಅಧ್ಯಕ್ಷನಿದ್ದೇನೆ. ಮುಂದಿನ ತಿಂಗಳು ಉರುಸ್ ಇರುವುದರಿಂದ ಹುಂಡಿಯ ಹಣ ತೆಗೆದಿದ್ದೇವೆ. ಈ ವಿಷಯವಾಗಿ ಇಳಕಲ್ಲ ನಗರ ಪೊಲೀಸ್‌ ಠಾಣೆಗೆ ಮತ್ತು ಹುನಗುಂದ ಡಿವೈಎಸ್ಪಿ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಮುರ್ತುಜಾ ಖಾದ್ರಿ ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ಸ್ಪಷ್ಟನೆ ನೀಡಿದ್ದಾರೆ.
ಇಲಾಖೆಯ ಕೆಲಸ ಕಾಲಮಿತಿಯೊಳಗೆ ಮುಗಿಸಿ: ಮೊಹಮ್ಮದ ಮೊಹಸಿನ್
ಬಾಗಲಕೋಟೆ: ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನ ಸಂಪೂರ್ಣವಾಗಿ ಭರಿಸುವ ಮೂಲಕ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸ ಬಾಕಿ ಉಳಿಸದೇ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ಬುಧವಾರ ಜರುಗಿದ ಜಿಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಗೆ ಬರುವ ಪ್ರತಿಯೊಂದು ಅರ್ಜಿಗಳು ಸಕಾಲದಡಿ ಬರುವುದರಿಂದ ಪ್ರತಿಯೊಂದು ಕಡತಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಳಹಂತದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಕೆಲಸ ಬಾಕಿ ಇದರಂತೆ ನೋಡಿಕೊಳ್ಳಲು ಸೂಚಿಸಿದರು.
ಸಂಸದ ಅನಂತಕುಮಾರ್‌ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಬೀಳಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿಯಾಗಿ ಹಾಗೂ ಸಾಮಾಜಿಕ ಸಾಮರಸ್ಯ ಕದಡುವ ಹೇಳಿಕೆ ನೀಡಿದ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಕೂಡಲೇ ಬಂಧಿಸಿ ಕಾನೂನು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಜಮಾವಣೆಗೊಂಡ ಮುಖಂಡರು, ಕಾರ್ಯಕರ್ತರು ಪಟ್ಟಣದ ಮುಖ್ಯ ರಸ್ತೆಯ ಮೂಲಕ ಪ್ರತಿಭಟನೆ ಮೆರವಣಿಗೆ ನಡೆಸಿ ಟಿಪ್ಪು ವೃತ್ತ, ಗಾಂಧಿ ವೃತ್ತದ ಮಾರ್ಗವಾಗಿ ತಹಸೀಲ್ದಾರ್‌ ಕಾರ್ಯಾಲಯ ತಲುಪಿ ಕೆಲಕಾಲ ಪ್ರತಿಭಟಿಸಿದರು.
ರಾಜೇಂದ್ರ ಭದ್ರನ್ನವರಗೆ ಕೆಎಚ್‌ಡಿಸಿ ಅಧ್ಯಕ್ಷ ಹುದ್ದೆ ನೀಡಲು ಆಗ್ರಹ
ರಬಕವಿ-ಬನಹಟ್ಟಿ: ರಾಜ್ಯ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಕೆಎಚ್‌ಡಿಸಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಕಾರ ಅನುಭವಿ ವ್ಯಕ್ತಿಯಾಗಿರುವ ರಾಜೇಂದ್ರ ಭದ್ರನ್ನವರರನ್ನೇ ನೇಮಕ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒಕ್ಕೊರಲಿನ ಒತ್ತಾಯಿಸಿದರು. ತೇರದಾಳದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಹಾಗೂ ನೇಕಾರ ಮುಖಂಡರ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮಡ್ಡಿಮನಿ ಮಾತನಾಡಿ, ನೇಕಾರ ಸಮುದಾಯದ ರಾಜೇಂದ್ರ ಅವರು ಪಕ್ಷದ ಸಂಘಟನೆಯಲ್ಲಿ ಅಹರ್ನಿಶಿ ಶ್ರಮಿಸಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ಅವರಿಗೆ ನೇಕಾರಿಕೆ ಉದ್ಯೋಗದ ಆಳಗಲದ ಪರಿಚಯವಿದೆ. ಹೀಗಾಗಿ ಅವರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
  • < previous
  • 1
  • ...
  • 338
  • 339
  • 340
  • 341
  • 342
  • 343
  • 344
  • 345
  • 346
  • ...
  • 372
  • next >
Top Stories
ಅಪ್ಪ ಬಿಟ್ಟ ಕುಲಕಸುಬನ್ನು ಶುರು ಮಾಡಿ ಉದ್ಯಮಿಯಾದ ಮಗ
ಜನರನ್ನು ಸ್ನೇಹಿತರು ಅಥವಾ ಶತ್ರುಗಳು ಎಂದು ವರ್ಗಿಕರಿಸದಿರುವುದನ್ನು ನಿಲ್ಲಿಸಿ
ರೇಪ್‌ ಕೇಸಲ್ಲಿ ರಾಜಕಾರಣಿ ಪ್ರಜ್ವಲ್‌ ರೇವಣ್ಣಗೆ ಆಜೀವ ಜೈಲು
ಕರ್ನಾಟಕ ಕ್ಷೇತ್ರದಲ್ಲಿ 1.5 ಲಕ್ಷ ಮತಕಳವು : ರಾಗಾ
ರಮ್ಯಾಗೆ ಕೀಳು ಸಂದೇಶ - ಇಬ್ಬರು ಅರೆಸ್ಟ್‌ : ಆರೋಪಿ ಕೂಲಿ ಕೆಲಸಗಾರರು
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved