• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ವಿವೇಕಾನಂದರ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು: ಅಜಯಕುಮಾರ ಸರನಾಯಕ
ಬೀಳಗಿ: ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರ ಸಂಘ ಹಾಗೂ ಅನ್ನದಾತ ಸಹಕಾರ ಸಂಘದ ಆಶ್ರಯದಲ್ಲಿ ಸ್ವಾಮಿ ವೀವೇಕಾನಂದರ 161ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡ ವಿವೇಕ ಉತ್ಸವ-8ರಲ್ಲಿ ರೋಬೋಟಿಕ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿ ಮತ್ತೆ ಕಾರ್ಯಾಗಾರವನ್ನು ಮಾಜಿ ಸಚಿವ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಉದ್ಘಾಟಿಸಿದರು. ಜಗತ್ತಿಗೆ ಸಂದೇಶ ಸಾರಿ, ಮಹಾನ್ ನಾಯಕರಾಗಿ ಪ್ರಸಿದ್ಧಿ ಪಡೆದಿರುವ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ಜರುಗಿದವು.
ಶರಣರಿಗೆ ಕೂಡಲಸಂಗಮ ತೀರ್ಥಕ್ಷೇತ್ರ: ಹಂಸಲೇಖ
ಬಾಗಲಕೋಟೆ: ನನ್ನ ಜೀವನದಲ್ಲಿ ಎಷ್ಟೋ ಪ್ರಮುಖ ಘಟನೆಗಳು ನಡೆದಿವೆ. ಕ್ರೈಸ್ತರಿಗೆ, ಮುಸ್ಲಿಮರಿಗೆ ಬೇರೆ ಬೇರೆ ತೀರ್ಥ ಕ್ಷೇತ್ರಗಳಿದ್ದರೆ, ಶರಣರಿಗೆ ಕೂಡಲಸಂಗಮ ತೀರ್ಥ ಕ್ಷೇತ್ರವಾಗಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. ಕೂಡಲಸಂಗಮದಲ್ಲಿ ನಡೆದ 37ನೇ ಶರಣಮೇಳದಲ್ಲಿ ರಾಷ್ಟ್ರಮಟ್ಟದ ಸ್ವಾಮಿ ಲಿಂಗಾನಂದ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಈ ಸಮಾಜದ ದಿಟ್ಟ ಮಹಿಳೆ, ಮೇಧಾ ಪಾಟ್ಕರ್ ಅವರು ಬಂದಿದ್ದಾರೆ. ಹೀಗಾಗಿ ಈ ಪ್ರಶಸ್ತಿಗೆ ರಾಷ್ಟ್ರಮಟ್ಟದ ಇಂಬು ಬಂದಿದೆ ಎಂದು ಬಣ್ಣಿಸಿದರು.
ರಾಮನಾಮ ತಾರಕ ಹೋಮ ಯಶಸ್ವಿಗೊಳಿಸಿ: ಮಾಜಿ ಶಾಸಕ ವೀರಣ್ಣ ಚರಂತಿಮಠ
ಬಾಗಲಕೋಟೆ: ಅಯೋಧ್ಯೆಯಲ್ಲಿ ಫ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜ.19 ರಂದು ರಾಮನಾಮ ತಾರಕ ಹೋಮ ಹಮ್ಮಿಕೊಂಡಿದ್ದು ಅದನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮನವಿ ಮಾಡಿದರು. ಬಸವೇಶ್ವರ ವೀರಶೈವ ವಿಧ್ಯಾವರ್ಧಕ ಸಂಘದ ಮಿನಿ ಆಡಿಟೋರಿಯಮ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ರಾಮನಾಮ ತಾರಕ ಹೋಮದ ಪೂರ್ವಭಾವಿ ವಿಶೇಷ ಸಭೆಯಲ್ಲಿ ಮಾತನಾಡಿದರು.ಜ.19 ರಂದು ವಿದ್ಯಾಗಿರಿಯಲ್ಲಿನ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಸಕಲ ಸಮಾಜದ 108 ದಂಪತಿಗಳಿಂದ 108 ಹೋಮ ಕುಂಡದಲ್ಲಿ ರಾಮನಾಮ ತಾರಕ ಹೋಮ ಮಾಡಲಾಗುತ್ತಿದೆ.
ವಿಶ್ವಗುರು ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ: ಮೇಧಾ ಪಾಟ್ಕರ್
ಬಾಗಲಕೋಟೆ: ವಿಶ್ವಗುರು ಎಂದರೆ ಯಾರೆಂಬ ನನ್ನ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬಸವಣ್ಣನವರೇ ನಿಜವಾದ ವಿಶ್ವಗುರು.ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಜಾತಿ ನಿರ್ಮೂಲನೆಗೆ ಹೋರಾಟ ಮಾಡಿದರು. ಇದರಲ್ಲಿ ಅವರ ಯೋಗದಾನ ಮಾತ್ರವಲ್ಲ, ಜೀವದಾನವೂ ಇದೆ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಹೇಳಿದರು. ಕೂಡಲಸಂಗಮದಲ್ಲಿ ಶನಿವಾರ ನಡೆದ ಶರಣಮೇಳದಲ್ಲಿ ಬಸವಾತ್ಮಜೆ ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಮಾಜಕ್ಕಾಗಿ ಪ್ರಾಣ ತ್ಯಾಗ ಮಾಡಿದ ವಿಶ್ವಗುರು ಬಸವಣ್ಣನವರು ಓರ್ವ ಕ್ರಾಂತಿಕಾರಿ ಮಹಾನ್ ಪುರುಷ ಎಂದರು.
ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು
ಕೆರೂರ: ಕೆರೂರ ಪೊಲೀಸ್‌ ಠಾಣಾ ವ್ಯಾಪ್ತಿಯ ಅಗಸನಕೊಪ್ಪ ಗ್ರಾಮದ ಹೊಲದಲ್ಲಿರುವ ಮನೆಯಲ್ಲಿದ್ದ ₹ 40 ಸಾವಿರ ಮೌಲ್ಯದ ಕೇಬಲ್ ಕಳ್ಳತನ ಪ್ರಕರಣ ಭೇದಿಸಿರುವ ಕೆರೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸೋನಿಯಾ ಉರ್ಫ ಸೋಹನ ಕಿಶೋರ ಮಚಲಿ. ಸಾಗರ ಶೇರಸಿಂಗ್‌ ಮಚಲಿ ಅವರನ್ನು ಬಂಧಿಸಿದ್ದು, ರಾಹುಲ್ ಕಿಶೋರ ಮಚಲಿ, ಮಹೇಶ ಉರ್ಫ ಚಿನ್ನು ಕಿಶೋರ ಮಚಲಿ ಪರಾರಿಯಾಗಿದ್ದು, ಶೋಧ ನಡೆಸಿದ್ದಾರೆ. ಅಗಸನಕೊಪ್ಪ ಗ್ರಾಮದ ಹೊಲದಲ್ಲಿರುವ ಮನೆಯಲ್ಲಿನ ₹ 40 ಸಾವಿರ ಬೆಲೆಬಾಳುವ 500 ಫೂಟ ಉದ್ದದ ಕೇಬಲ್‌ ಕಳ್ಳತನ ಮಾಡಿದ್ದರು.
ಶರಣರು ಎಂದರೆ ಜಾತಿ, ವರ್ಗ ಇಲ್ಲದವರು: ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ: ಬಸವಾದಿ ಶರಣರ ಆಶಯದಂತೆ ಜಾತಿ ರಹಿತ ಸಮಾಜ ನಿರ್ಮಾಣ ಶರಣರಿಂದ ಮಾತ್ರ ಸಾಧ್ಯ. ಶರಣ ಎಂದರೆ ಜಾತಿ, ವರ್ಗ ಇಲ್ಲದ್ದು. ಶರಣ ಮೇಳ ಎಂದರೆ ಜಾತಿಯಿಂದ ಮುಕ್ತರಾದ ಮನುಷ್ಯರ ಮೇಳ ಎಂದು ಸಿ.ಎಂ. ಸಿದ್ದರಾಮಯ್ಯ ಹೇಳಿದರು. ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಕೂಡಲಸಂಗಮದಲ್ಲಿ ಆಯೋಜಿಸಿದ್ದ 37ನೇ ಶರಣ ಮೇಳ ಉದ್ಘಾಟಿಸಿ ಮಾತನಾಡಿದರು. ಬಸವಾದಿ ಶರಣರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದರು. ಪಟ್ಟಭದ್ರ ಹಿತಾಸಕ್ತಿಗಳು ಚಲನೆ ರಹಿತ ಜಾತಿ ವ್ಯವಸ್ಥೆ ರೂಪಿಸಿದ್ದರು. ಇದನ್ನು ವಿರೋಧಿಸಿದ ಬಸವಣ್ಣನವರು ಜಾತಿ, ಆಚರಣೆಗಳು ದೇವರು ಮಾಡಿದ್ದಲ್ಲ ಎಂದು ಸಾರಿದರು.
ಮಕ್ಕಳಿಗೆ ಸಂಸ್ಕಾರ ಬೆಳೆಸುವುದು ಅತ್ಯಗತ್ಯ: ಮಹಾದೇವ ಜಾಡರ
ತೇರದಾಳ(ರ-ಬ): ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಶಿಕ್ಷಣಕ್ಕೆ ಪ್ರಾಧಾನ್ಯತೆ ದೊರೆಯುತ್ತಿದೆ. ಆದರೆ, ಕನಿಷ್ಠ ಮಾನವೀಯತೆ ಬೆಳೆಸುವ ಮತ್ತು ಗುರು-ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸುವ ಸಂಸ್ಕಾರ ಮೂಡಿಸುವತ್ತ ವಿಮುಖರಾಗುತ್ತಿರುವುದರಿಂದ ಸುಶಿಕ್ಷಿತರಾದವರೆಲ್ಲ ಸಂಸ್ಕಾರವಂತರಾಗುತ್ತಿಲ್ಲ ಎಂದು ಮಹಾದೇವ ಜಾಡರ ಕಳವಳ ವ್ಯಕ್ತಪಡಿಸಿದರು. ತೇರದಾಳದ ಶ್ರೀನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ನಡೆದ ಪಾಲಕರ, ಗುರುಗಳ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ಮಾಡಬೇಕಾದ ಕರ್ತವ್ಯಗಳ ಬಗ್ಗೆ ಪ್ರತಿಜ್ಞೆ ಬೋಧಿಸಿದರು. ಮಕ್ಕಳು ಶಿಕ್ಷಕರ ಪಾದಪೂಜೆ ನೆರವೇರಿಸಿದರು.
ಅನಂತಕುಮಾರ್‌ರಿಂದ ಸಂಸ್ಕೃತಿ ನಿರೀಕ್ಷಿಸಲು ಆಗುತ್ತಾ ?
ಬಾಗಲಕೋಟೆ: ಅದು ಅವರ ಸಂಸ್ಕೃತಿ. ಅವರಿಂದ ನಾವು ಸಂಸ್ಕೃತಿ ಬಯಸೋಕೆ ಆಗುತ್ತಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಅನಂತಕುಮಾರ ಹೆಗಡೆಗೆ ತಿರುಗೇಟು ನೀಡಿದರು. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಶನಿವಾರ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಅವರು ಕೇಂದ್ರ ಮಂತ್ರಿ ಆಗಿದ್ದಾಗ, ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾವಣೆ ಮಾಡಲಿಕ್ಕೆ ಎಂದು ಹೇಳಿದ್ದರು. ಇವರನ್ನು ಸುಸಂಸ್ಕೃತರು ಎಂದು ಹೇಳಲು ಆಗುತ್ತಾ? ಎಂದು ಛೇಡಿಸಿದರು.
18ರಿಂದ ಬಾದಾಮಿ ಬನಶಂಕರಿ ಜಾತ್ರೆ ಆರಂಭ

ಬಾದಾಮಿ: ದಕ್ಷಿಣ ಭಾರತದಲ್ಲಿಯೇ ಸುಪ್ರಸಿದ್ಧ ಸುಕ್ಷೇತ್ರ ಬನಶಂಕರಿಯ ಜಾತ್ರಾ ಮಹೋತ್ಸವ ಜ.18 ರಿಂದ 29ರವರೆಗೆ ಅದ್ಧೂರಿಯಾಗಿ ಜರುಗಲಿದೆ. 

ರಾಷ್ಟ್ರೀಯ ಡಾಡ್ಜ್‌ ಬಾಲ್‌ ಪಂದ್ಯಾವಳಿಯಲ್ಲಿ ಸಾಧನೆ
ಮಹಾಲಿಂಗಪುರ: ಇತ್ತಿಚೆಗೆ ಹರ್ಯಾಣದಲ್ಲಿ ನಡೆದ ಭಾರತೀಯ ಫೆಡರೇಷನ್ ಮಾನ್ಯತೆ ಪಡೆದ ರಾಷ್ಟ್ರೀಯ ಡಾಡ್ಜ್‌ಬಾಲ್ ಅಂತಾರಾಜ್ಯ ಪಂದ್ಯಾವಳಿಯಲ್ಲಿ ಕರ್ನಾಟಕ ಸಬ್ ಜೂನಿಯರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಲ್ಲದೆ, ಈ ತಂಡದ ಸದಸ್ಯೆಯಾಗಿ ಸ್ಥಳೀಯ ಖ್ಯಾತ ವೈದ್ಯ ಶ್ರೀನಿವಾಸ ಕನಕರೆಡ್ಡಿ ಅವರ ಪುತ್ರಿ ಕುಮಾರಿ ರಾಜೇಶ್ವರಿ ಕನಕರೆಡ್ಡಿ ಕೂಡ ಭಾಗವಹಿಸಿದ್ದು, ಮಹಾಲಿಂಗಪುರದ ಖ್ಯಾತಿ ಹೆಚ್ಚಿಸಿದ್ದಾಳೆ.
  • < previous
  • 1
  • ...
  • 342
  • 343
  • 344
  • 345
  • 346
  • 347
  • 348
  • 349
  • 350
  • ...
  • 372
  • next >
Top Stories
ರೇಪ್‌ ಕೇಸಲ್ಲಿ ರಾಜಕಾರಣಿ ಪ್ರಜ್ವಲ್‌ ರೇವಣ್ಣಗೆ ಆಜೀವ ಜೈಲು
ಕರ್ನಾಟಕ ಕ್ಷೇತ್ರದಲ್ಲಿ 1.5 ಲಕ್ಷ ಮತಕಳವು : ರಾಗಾ
ರಮ್ಯಾಗೆ ಕೀಳು ಸಂದೇಶ - ಇಬ್ಬರು ಅರೆಸ್ಟ್‌ : ಆರೋಪಿ ಕೂಲಿ ಕೆಲಸಗಾರರು
ಸಿಇಟಿ ಸೀಟು ಹಂಚಿಕೆಯ ಅಂತಿಮ ರಿಸಲ್ಟ್‌ ಪ್ರಕಟ: ಕಾಲೇಜು ಪ್ರವೇಶ ಶುರು
ಅಂಗನವಾಡಿಯಲ್ಲಿ ಮಕ್ಕಳ ಕೂಡಿ ಹಾಕಿ ಜಮೀನು ಕೆಲಸಕ್ಕೆ ಹೋದ ಸಹಾಯಕಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved