ಪೋಲಿಯೋ ಹನಿ ಹಾಕಿಸಿ ಅಂಗವಿಕಲತೆಯಿಂದ ರಕ್ಷಿಸಿ: ಶಾಸಕ ಎಚ್.ವೈ. ಮೇಟಿದೇಶ ಪೋಲಿಯೂ ಮುಕ್ತವಾಗಿದ್ದರೂ, ಭವಿಷ್ಯದ ದೃಷ್ಟಿಯಿಂದ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ನೀಡಲಾಗುತ್ತಿದೆ. ಸರ್ಕಾರದ ಈ ಸೌಲಭ್ಯವನ್ನು ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ, ನಗರಾಭಿವೃದ್ಧಿ ಅಧ್ಯಕ್ಷ ಎಚ್.ವೈ. ಮೇಟಿ ಹೇಳಿದರು.