• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಧಾರ್ಮಿಕ ಕೇಂದ್ರ ಸ್ವಚ್ಛತೆಯ ಬಗ್ಗೆ ಜಾಗೃತಿ ಅವಶ್ಯ: ಶಾಸಕ ಸಿದ್ದು ಸವದಿ
ರಬಕವಿ-ಬನಹಟ್ಟಿ: ಧಾರ್ಮಿಕ ಕೇಂದ್ರಗಳನ್ನು ಸ್ವಚ್ಛ ಮಾಡುವ ಮೂಲಕ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಪಟ್ಟಣಗಳು ಸ್ವಚ್ಛವಾಗಿರಲು ಜನರಲ್ಲಿ ಸ್ವಚ್ಛತೆಯ ಪರಿಕಲ್ಪನೆ ಮೂಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು. ರಬಕವಿಯ ಮಲ್ಲಿಕಾರ್ಜುನ, ಬನಶಂಕರಿ, ಮಹಾದೇವರ ದೇವಸ್ಥಾನ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ ಪಾಲನೆಯೊಂದಿಗೆ ಪಾವಿತ್ರ‍್ಯ ರಕ್ಷಣೆ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಮನೆ ಮನೆಗೆ ಮಂತ್ರಾಕ್ಷತೆ ಮತ್ತು ಕರ ಪತ್ರ ವಿತರಣೆ
ಗುಳೇದಗುಡ್ಡ: ತಾಲೂಕಿನ ಖಾಜಿಬೂದಿಹಾಳ ಗ್ರಾಮದಲ್ಲಿ ಭಾನುವಾರ ಅಯೋಧ್ಯೆದ ಪವಿತ್ರವಾದ ಮಂತ್ರಾಕ್ಷತೆ ಹಾಗೂ ಪ್ರಭು ಶ್ರೀರಾಮ ಮಂದಿರದ ಭಾವಚಿತ್ರ ಹಾಗೂ ಕರಪತ್ರಗಳನ್ನು ಗ್ರಾಮದ ಮಾರುತೇಶ್ವರ ಮಂದಿರದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿದ ನಂತರ ಗ್ರಾಮದ ಪ್ರತಿ ಮನೆ ಮನೆಗೆ ಮಂತ್ರಾಕ್ಷತೆ ಹಾಗೂ ಕರಪತ್ರಗಳನ್ನು ವಿತರಿಸಲಾಯಿತು.
ನೇಕಾರರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್
ಇಳಕಲ್ಲ: ನಗರದ ಶಾಸಕರ ಗೃಹ ಕಚೇರಿಯಲ್ಲಿ ಜವಳಿ ಇಲಾಖೆ ವತಿಯಿಂದ ಕೂಡ ಮಾಡುವ ನೇಕಾರರ ಸ್ಮಾರ್ಟ್‌ ಕಾರ್ಡ್‌ ಶಾಸಕ ವಿಜಯಾನಂದ ಕಾಶಪ್ಪನವರ್ ನೇಕಾರರಿಗೆ ವಿತರಣೆ ಮಾಡಿದರು. ಪಾವರ್ ಲೂಮ್ ನೇಕಾರರಿಗೆ ಬಾಗಲಕೋಟೆ ಜವಳಿ ಇಲಾಖೆ ವತಿಯಿಂದ ನೀಡುವ ನೇಕಾರ ಸ್ಮಾರ್ಟ್‌ ಕಾರ್ಡ್‌ ನಗರದ ನೇಕಾರರಿಗೆ ವಿತರಣೆ ಮಾಡಿ, ಶಾಸಕರು ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ದೊರೆಯಲಿ: ರತ್ನಮ್ಮ ಚಿಮ್ಮನಕಟ್ಟಿ
ಬಾದಾಮಿ: ವಿದ್ಯಾರ್ಥಿಗಳು ಜೀವನದಲ್ಲಿ ನೈತಿಕ ಶಿಕ್ಷಣ, ಬೌದ್ಧಿಕ ಶಿಕ್ಷಣ, ಮೌಲ್ಯ ಶಿಕ್ಷಣ ಅಳವಡಿಸಿಕೊಂಡು ಅಂಕಗಳೊಂದಿಗೆ ಸಂಸ್ಕಾರವನ್ನು ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗುತ್ತಾನೆ. ಓದುವ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ತತ್ಸಾರ ಮನೋಭಾವದಿಂದ ಕಾಣಬಾರದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ತಾಯಿ ರತ್ನಮ್ಮ ಚಿಮ್ಮನಕಟ್ಟಿ ಹೇಳಿದರು. ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಂಬಾಕು ಮಾರಾಟಗಾರರಿಗೆ ಗುಲಾಬಿ ನೀಡಿ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು
ಬಾಗಲಕೋಟೆ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯೋಗದಲ್ಲಿ ಬಾಗಲಕೋಟೆ ಜಿಲ್ಲಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ, ರಾಷ್ಟ್ರೀಯ ಯುವ ದಿನ ಪ್ರಯುಕ್ತ ಗುಲಾಬಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲಾ ಮಕ್ಕಳ ಮೂಲಕ ಜಾಥಾ ಹಮ್ಮಿಕೊಂಡು ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಕುರಿತು ಹಾಗೂ ತಂಬಾಕು ಸೇವನೆ ಮತ್ತು ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಜಾಗೃತಿ ಮೂಡಿಸಲಾಯಿತು.
ದೇಸಿ ಹಬ್ಬಗಳಿಂದ ಬಾಂಧವ್ಯ ವೃದ್ಧಿ: ಗತಿಪರ ರೈತ ಪಾಂಡುರಂಗ ಸಣ್ಣಪ್ಪನವರ
ಬಾಗಲಕೋಟೆ: ಜಾನಪದ ಮತ್ತು ಸಂಸ್ಕೃತಿಗಳು ನಮ್ಮ ದೇಶದ ಪ್ರತೀಕವಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಹೊಣೆ ಯುವಕರ ಮೇಲಿದೆ ಎಂದು ಬೆನಕಟ್ಟಿಯ ಪ್ರಗತಿಪರ ರೈತ ಪಾಂಡುರಂಗ ಸಣ್ಣಪ್ಪನವರ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸಂಕ್ರಾಂತಿ ಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾಷಣ, ರಂಗೋಲಿ, ಪ್ರಬಂಧ, ಹಗ್ಗಜಗ್ಗಾಟ, ಮ್ಯೂಸಿಕಲ್ ಚೇರ್, ಜಾನಪದ ನೃತ್ಯ, ಜಾನಪದ ಗೀತೆಗಳು ಸೇರಿದಂತೆ ಹಲವಾರು ಸ್ಪರ್ಧೆ ಏರ್ಪಡಿಸಲಾಗಿತ್ತು.
ಬನಶಂಕರಿದೇವಿಗೆ ಪಿತಾಂಬರ ಸೀರೆ ಅರ್ಪಣೆ: 18ರಿಂದ ಪಾದಯಾತ್ರೆ
ಬಾದಾಮಿ: ಹಂಪಿಯ ಶ್ರೀ ಗಾಯತ್ರೀ ಪೀಠ ಮಹಾಸಂಸ್ಥಾನ, ಹೇಮಕೂಟ-ಹಂಪೆ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ಬಾದಾಮಿ-ಬನಶಂಕರಿ ದೇವಸ್ಥಾನಕ್ಕೆ ಬಾಗಿನ ಮತ್ತು ದೇವಿಗೆ ಪಿತಾಂಬರ ಸೀರೆ ಅರ್ಪಣೆ ಪ್ರಯುಕ್ತ ಪಾದಯಾತ್ರೆ ಜ.18ರಂದು ಆರಂಭವಾಗಲಿದೆ ಎಂದು ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ತಿಳಿಸಿದ್ದಾರೆ. ಪಾದಯಾತ್ರೆಯು ನೂತನ ಪಲ್ಲಕ್ಕಿಯೊಂದಿಗೆ ಶ್ರೀ ಗಾಯತ್ರೀ ಪೀಠ ಹಂಪಿಯಿಂದ ಜ.18ರಂದು ಬೆಳಗ್ಗೆ 6 ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಲಿದೆ.
ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ಮಾಡಿಲ್ಲ: ಆರ್‌.ಬಿ. ಸಚಿವ ತಿಮ್ಮಾಪುರ
ಬಾಗಲಕೋಟೆ: ನನ್ನ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡಿಲ್ಲ, ಹೀಗಾಗಿ ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವ ಆಗಲ್ಲ, ಅವನ್ಯಾವನೋ ಕಂಪ್ಲೆಂಟ್ ಮಾಡಿದವನನ್ನು ಹುಡುಕಾಡುತ್ತಿದ್ದೇವೆ, ಅವನೆಲ್ಲಿದ್ದಾನೋ ಗೊತ್ತಿಲ್ಲ, ಅವನು ನಮಗೆ ಸಿಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನಾದರೂ ವರ್ಗಾವಣೆ ಮಾಡಿದರೆ ತಾನೆ ಭ್ರಷ್ಟಾಚಾರ ಆಗುತ್ತೆ? ವರ್ಗಾವಣೆ ಆದ ತಕ್ಷಣ ಭ್ರಷ್ಟಾಚಾರವೇ ಆಗಿರುತ್ತದೆಯೇ? ಯಾರೋ ಆಗದೇ ಇರುವವರು ಇಂತದ್ದೆಲ್ಲ ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದರು.
ಅನಂತಕುಮಾರ್‌ ಹೆಗಡೆ ಕೂಡಲೇ ಸಿಎಂ ಕ್ಷಮೆ ಯಾಚಿಸಲಿ: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ
ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏಕವಚನ ಬಳಸಿದ ಸಂಸದ ಅನಂತಕುಮಾರ್‌ ಹೆಗಡೆ ಕೂಡಲೇ ಸಿಎಂ ಕ್ಷಮೆ ಯಾಚಿಸಬೇಕು ಎಂದು ಸಚಿವ ಆರ್.ಬಿ. ತಿಮ್ಮಾಪುರ ಆಗ್ರಹಿಸಿದರು. ಭಾನುವಾರ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ. ಅದಕ್ಕೆ ಗೌರವ ಕೊಡ ಬೇಕಾಗಿರೋದು ಎಲ್ಲರ ಧರ್ಮ. ಅನಂತಕುಮಾರ್‌ ಹೆಗಡೆ ಯಾವುದೇ ಪಕ್ಷದಿಂದ ಗೆದ್ದಿರಬಹುದು. ಆ ರೀತಿಯ ಮಾತು ಯಾರಿಗೂ ಶೋಭೆಯಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇನೆ ಎನ್ನುತ್ತಾರೆ ಸಂವಿಧಾನ ಇವನೊಬ್ಬನಿಗೆ ಬರೆದು ಕೊಟ್ಟಿದ್ದಾರಾ ಎಂದು ಟೀಕಿಸಿದರು.
ಬೀದಿ ದೀಪಗಳಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ
ಬಾದಾಮಿ: ಸಮೀಪದ ಬನಶಂಕರಿ ದೇವಸ್ಥಾನಕ್ಕೆ ತೆರಳುವ 5 ಕಿ.ಮೀ ರಸ್ತೆಯ ಇಕ್ಕೆಲುಗಳಲ್ಲಿ ಹಾಕಲಾಗಿರುವ ಬೀದಿ ದೀಪಗಳಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಶುಕ್ರವಾರ ಸಂಜೆ ಚಾಲನೆ ನೀಡಿದರು.ಜ.25ರಂದು ಸುಪ್ರಸಿದ್ಧ ಬಾದಾಮಿ-ಬನಶಂಕರಿದೇವಿ ಜಾತ್ರೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಜರುಗಿದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಬೀದಿ ದೀಪಗಳನ್ನು ಕೂಡಲೇಹಾಕಬೇಕು. ಭಕ್ತಾಧಿಗಳಿಗೆ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದ್ದರು. ಲೋಕೋಪಯೋಗಿ ಇಲಾಖೆಯ ₹ 2 ಕೋಟಿ ವೆಚ್ಚದಲ್ಲಿ 20 ಹೈಮಾಸ್ಟ್, 150 ಬೀದಿದೀಪಗಳನ್ನು ನಗರದ ಅಂಬೇಡ್ಕರ್‌ ವೃತ್ತದಿಂದ ಹಾದಿಮನಿ ಪೆಟ್ರೋಲ್ ಬಂಕ್‌ವರೆಗೆ ಬನಶಂಕರಿ ದೇವಸ್ಥಾನಕ್ಕೆ ತೆರಳುವ ಪಾದಯಾತ್ರಿಗಳಿಗೆ ಸಂಚರಿಸಲು ಅನಕೂಲವಾಗಲಿದೆ.
  • < previous
  • 1
  • ...
  • 341
  • 342
  • 343
  • 344
  • 345
  • 346
  • 347
  • 348
  • 349
  • ...
  • 372
  • next >
Top Stories
ರೇಪ್‌ ಕೇಸಲ್ಲಿ ರಾಜಕಾರಣಿ ಪ್ರಜ್ವಲ್‌ ರೇವಣ್ಣಗೆ ಆಜೀವ ಜೈಲು
ಕರ್ನಾಟಕ ಕ್ಷೇತ್ರದಲ್ಲಿ 1.5 ಲಕ್ಷ ಮತಕಳವು : ರಾಗಾ
ರಮ್ಯಾಗೆ ಕೀಳು ಸಂದೇಶ - ಇಬ್ಬರು ಅರೆಸ್ಟ್‌ : ಆರೋಪಿ ಕೂಲಿ ಕೆಲಸಗಾರರು
ಸಿಇಟಿ ಸೀಟು ಹಂಚಿಕೆಯ ಅಂತಿಮ ರಿಸಲ್ಟ್‌ ಪ್ರಕಟ: ಕಾಲೇಜು ಪ್ರವೇಶ ಶುರು
ಅಂಗನವಾಡಿಯಲ್ಲಿ ಮಕ್ಕಳ ಕೂಡಿ ಹಾಕಿ ಜಮೀನು ಕೆಲಸಕ್ಕೆ ಹೋದ ಸಹಾಯಕಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved