ಸಂಘಟನೆಗಳು ಸಮಾಜದ ಧ್ವನಿಯಾಗಲಿಸಂಘ ಸಂಸ್ಥೆಗಳು ಸಮಾಜದ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ನುಡಿದರು.ತಾಲೂಕಿನ ನಾವಲಗಿ ಗ್ರಾಮದಲ್ಲಿ ಜಂಗಮ ಸಮಾಜದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಯುವಕ ಸಂಘದ ಉದ್ಘಾಟನಾ ಸಮಾರಂಭದದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿರುವ ಬಡವರ ಪರ ಟೊಂಕಕಟ್ಟಿ ಸರ್ವ ಪದಾಧಿಕಾರಿಗಳು ನಿಂತುಕೊಂಡು ಮೇಲೆತ್ತುವ ಕಾರ್ಯ ಮಾಡಿದಾಗ ಮಾತ್ರ ಸಂಘ ಸ್ಥಾಪನೆಗೊಂಡಿರುವುದಕ್ಕೆ ನಿಜಕ್ಕೂ ಸಾರ್ಥಕವಾಗುತ್ತದೆ ಎಂದರು.