ಸರ್ಕಾರಿ ಕಾರ್ಯದಲ್ಲಿ ವಿನಾಕಾರಣ ವಿಳಂಬವು ಭ್ರಷ್ಟಾಚಾರಕ್ಕೆ ಸಮಕನ್ನಡಪ್ರಭ ವಾರ್ತೆ ಜಮಖಂಡಿ ಸರ್ಕಾರಿ ಅಧಿಕಾರಿಗಳು ತಮ್ಮ ಕಾರ್ಯ ಸ್ವರೂಪ ಬದಲಾಯಿಸಿಕೊಳ್ಳಿ ಎಂದು ಲೋಕಾಯುಕ್ತ ಎಸ್‌ಪಿ ಸತೀಶ ಚಿಟಗುಪ್ಪಿ ತಾಕೀತು ಮಾಡಿದರು. ತಹಸೀಲ್ದಾರ ಕಚೇರಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಕೆಲಸಕ್ಕೆ ಹಣ ಪಡೆಯುವದು ಹಾಗೂ ವಿನಾಕಾರಣ ವಿಳಂಬ ಮಾಡುವುದನ್ನು ಭ್ರಷ್ಟಾಚಾರ ಎಂದು ಪರಿಗಣಿಸಲಾಗುತ್ತದೆ.