ಬೆಳಗಾವಿಗೆ ಆವರಿಸಿದ ಜಲಕಂಟಕಸಪ್ತ ನದಿಗಳ ಜಿಲ್ಲೆ ಎಂದೇ ಖ್ಯಾತಿಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಈಗ ನೀರಿನ ಬರ ಆರಂಭಗೊಂಡಿದೆ. ಎರಡು ಡ್ಯಾಂಗಳು, 7 ನದಿಗಳು, 290ಕ್ಕೂ ಅಧಿಕ ಕೆರೆಗಳು ಇದ್ದರೂ ನೀರಿನ ದಾಹ ಮಾತ್ರ ಈ ಬೇಸಿಗೆಗೆ ತೀರುತ್ತಿಲ್ಲ. ಇದು ಬರೀ ಕೇವಲ ನಗರ, ಪಟ್ಟಣದ ಪರಿಸ್ಥಿತಿಯಲ್ಲ. ಗ್ರಾಮೀಣ ಪ್ರದೇಶದಲ್ಲಿಯೂ ಜನರು ತೀವ್ರ ಪರದಾಡುವಂತಾಗಿದೆ.