ಮಾಧ್ಯಗಳ ಹತ್ತಿಕ್ಕುವ ಕೆಲಸ ಬೇಡ: ಸಂಸದ ಡಾ.ಸುಧಾಕರ್ದಾಬಸ್ಪೇಟೆ: ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅಶೋಕ ಸ್ತಂಭದಲ್ಲಿ ಕಾಣದೇ ಇರುವ ನಾಲ್ಕನೇ ಸಿಂಹದ ರೀತಿ ಇದ್ದು ಜನಪ್ರತಿನಿಧಿಗಳ ತಪ್ಪು ಒಪ್ಪುಗಳನ್ನು ತಿದ್ದುತ್ತಾ, ವಾಸ್ತವವನ್ನು ವರದಿ ಮಾಡುವುದು ಅವರ ಸ್ವಾತಂತ್ರ್ಯ. ಅವರನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ತಮ್ಮದೇ ಪಕ್ಷದ ಮುಖಂಡರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದರು.