ವಿಮರ್ಶೆಗೆ ವಿಳಂಬ ಸರಿಯಲ್ಲ: ಬರಗೂರುವಿಮರ್ಶೆಗೆ ವಿಳಂಬ ಸರಿಯಲ್ಲ: ಬರಗೂರು ರಾಮಚಂದ್ರಪ್ಪನಗರದ ನಯನ ಸಭಾಂಗಣದಲ್ಲಿ ಕನ್ನಡ ಜನಶಕ್ತಿ ಕೇಂದ್ರ ಸೋಮವಾರ ಆಯೋಜಿಸಿದ್ದ ಡಾ। ಮುಮ್ತಾಜ್ ಬೇಗ್ ಬರೆದಿರುವ ‘ಭೂಮಿ ಬೆಳಕಿನ ಬರಗೂರು ಕಾವ್ಯ’ ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಅಭಿಮತಕಾವ್ಯ, ಬರಹಗಳಿಗೆ ತಕ್ಷಣ ಒಳ್ಳೆಯ ವಿಮರ್ಶೆ ಬಂದರೆ ಬರಹಗಾರರು ತಿದ್ದಿಕೊಳ್ಳಲು, ಬೆಳೆಯಲು ಸಾಧ್ಯವಾಗುತ್ತದೆ. ಅಂತಹ ವಾತಾವರಣ ನಮ್ಮಲ್ಲಿ ಬೇಕಾಗಿದೆ. ವಿಮರ್ಶೆಯು ಹೊಗಳಿಕೆಯೇ ಆಗಬೇಕಿಲ್ಲ. ಪೂರ್ವಗ್ರಹ ಇಲ್ಲದ ಟೀಕೆಗಳನ್ನು ಸಹಿಸಿಕೊಳ್ಳಬೇಕು. ಆದರೆ, ವಿಮರ್ಶೆಗಳಿಗೆ ವಿಳಂಬ ನೀತಿ ಸರಿಯಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.