ಆರು ತಿಂಗಳೊಳಗೆ 64 ಹಳ್ಳಿಗಳಿಗೆ ಶುದ್ಧ ನೀರು: ಸಚಿವ ಖಂಡ್ರೆತಾಲೂಕಿನ 64 ಜನವಸತಿ (ಹಳ್ಳಿ) ಪ್ರದೇಶಗಳಿಗೆ ಮುಂದಿನ 6 ತಿಂಗಳೊಳಗೆ ಶಾಶ್ವತ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ತಾಲೂಕಿನ ಖಟಕ್ ಚಿಂಚೋಳಿ ಸಮೀಪ ಶನಿವಾರ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ ಮಾತನಾಡಿ, ಪಟ್ಟಣಕ್ಕೆ ಈಗಾಗಲೇ ಸುಮಾರು 140 ಕೋಟಿ ರು. ವೆಚ್ಚದಲ್ಲಿ ಕಾರಂಜಾ ಜಲಾಶಯದ ಮೂಲಕ ನೆರವಾಗಿ ಪೈಪ್ಲೈನ್ ಕಾಮಗಾರಿ ಕೈಗೊಂಡು ಪಟ್ಟಣದ ಸುಮಾರು 50 ಸಾವಿರ ಜನರಿಗೆ 24/7 ಶುದ್ಧ ನೀರು ಒದಗಿಸಲಾಗುತ್ತಿದೆ.