3 ಪುರಸಭೆ ವ್ಯಾಪ್ತಿಯಲ್ಲಿ ಅಮೃತ 2.0 ಯೋಜನೆ: ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಪೂರೈಕೆ ಕಾಮಗಾರಿ ಅಮೃತ 2.0 ಯೋಜನೆಯು ಹುಮನಾಬಾದ್, ಚಿಟಗುಪ್ಪ, ಹಳ್ಳಿಖೇಡ (ಬಿ) ಪುರಸಭೆಯ ವ್ಯಾಪ್ತಿಯಲ್ಲಿ ಗುತ್ತಿಗೆ ದಾರರು ನಿಗದಿತ ಅವಧಿಯಲ್ಲಿ ಪ್ರತಿ ಮನೆಗಳ ನಲ್ಲಿಗಳ ಮೂಲಕ 20x7 ಕುಡಿಯುವ ನೀರು ಒದಗಿಸಲು ಗುಣಮಟ್ಟ ಕಾಮಗಾರಿ ಕಾಯ್ದುಕೊಳ್ಳಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್ ಮಾಹಿತಿ ನೀಡಿದರು.