ಗುಂಡ್ಲುಪೇಟೆಯಲ್ಲಿ ಕ್ರಿಸ್‌ಮಸ್: ಚರ್ಚ್‌ಗಳಲ್ಲಿ ಯೇಸು ಕ್ರಿಸ್ತನ ಕೊಂಡಾಡಿದ ಕ್ರೈಸ್ತರುಕ್ರಿಸ್ಮಸ್ ಹಿನ್ನೆಲೆಯಲ್ಲಿ ಕ್ರೈಸ್ತರು ಪಟ್ಟಣದ ಚರ್ಚ್‌ಗಳಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಏಸುಕ್ರಿಸ್ತನ ಹುಟ್ಟುವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಗುಂಡ್ಲುಪೇಟೆ ಪಟ್ಟಣದ ಸೈಂಟ್ ಕುರಿಯಾಕೋಸ್ ಎಲಿಯಾಸ್ ಚರ್ಚ್‌ನಲ್ಲಿ ಫಾದರ್ ಸನ್ನಿ, ಫಾದರ್ ರಿಜೀಶ್ ಪುತಿಯಾಪರಂಬಿಲ್, ಫಾದರ್ ಆ್ಯಂಟನಿ, ಫಾದರ್ ಅಜು ಅವರು ಡಿ.೨೪ರ ಮಂಗಳವಾರ ಮಧ್ಯರಾತ್ರಿ ಯೇಸು ಕ್ರಿಸ್ತನ ಜನನವನ್ನು ಕೊಂಡಾಡಿದರು.