ರಾಜಕಾರಣಿಗಳಿಗೂ ಅಧಿಕಾರ ಶಾಶ್ವತವಲ್ಲ: ಆರ್.ನರೇಂದ್ರಮನುಷ್ಯನಿಗೆ ಜೀವನವೇ ಶಾಶ್ವತವಲ್ಲ. ಅದೇ ರೀತಿ ಯಾವ ರಾಜಕಾರಣಿಗಳಿಗೂ ಅಧಿಕಾರ ಶಾಶ್ವತವಲ್ಲ, ಸಾರ್ವಜನಿಕರು ಅಧಿಕಾರ ಕೊಟ್ಟಾಗ ಯಾವ ರೀತಿ ಸ್ಪಂದನೆ ಮಾಡಿದ್ದೇವೆ ಎಂಬುದೇ ಮುಖ್ಯ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು. ಹನೂರಿನ ಮಲೆ ಮಹದೇಶ್ವರ ಬೆಟ್ಟದ ಮಹದೇವ ನಗರದ ಮಕ್ಕಳ ಮಾರಮ್ಮ ದೇವಸ್ಥಾನದ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ ಮಾತನಾಡಿದರು.