ಜಾನುವಾರನ್ನು ಸಾಕಿ ಲಾಭ ಪಡೆದುಕೊಳ್ಳಿ: ಶಾಸಕ ಕೃಷ್ಣಮೂರ್ತಿರೈತರು ತಮ್ಮ ಕೃಷಿಯ ಜೊತೆ ಹೈನುಗಾರಿಕೆ ಹಾಗೂ ಕುರಿ, ಕೋಳಿ ಸಾಕಾಣಿಕೆಯಂತಹ ಉಪ ಕಸುಬುಗಳನ್ನು ಮಾಡುವುದರಿಂದ ಹೆಚ್ಚು ಲಾಭ ಪಡೆದುಕೊಳ್ಳಬಹುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು. ಯಳಂದೂರಿನಲ್ಲಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಕುರಿಮರಿಗಳನ್ನು ವಿತರಿಸಿ ಅವರು ಮಾತನಾಡಿದರು.