ಕಡವೆ ಕೊಂದ ಬೇಟೆಗಾರರ ಬಂಧನ ೩ ತಿಂಗ್ಳಾದ್ರು ಆಗಿಲ್ಲ!ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಕಡವೆ ಬೇಟೆಗೆ ಬಂದ ಬೇಟೆಗಾರರು, ಅರಣ್ಯ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಬೇಟೆಗಾರ ಸಾವನ್ನಪ್ಪಿದ್ದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇತರೆ ಏಳೆಂಟು ಮಂದಿ ಬೇಟೆಗಾರರನ್ನು ಬಂಧಿಸಲು ಗುಂಡ್ಲುಪೇಟೆ ಪೊಲೀಸರಿಂದ ಸಾಧ್ಯವಾಗಿಲ್ಲ.