ಬೀದಿ ನಾಯಿಗಳ ನಿಯಂತ್ರಣ ನಿರ್ಲಕ್ಷ್ಯ: ಸಾರ್ವಜನಿಕರ ಆಕ್ರೋಶಕೊಪ್ಪ, ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆ, ತ್ಯಾಗರಾಜರಸ್ತೆಯ ಲಯನ್ಸ್ ಸೇವಾಮಂದಿರ ರಸ್ತೆ, ಹನುಮಾನ್ ನಗರ ರಸ್ತೆ, ವಿವೇಕಾ ನಂದ ರಸ್ತೆ, ಮೇಲಿನಪೇಟೆಯ ವಿದ್ಯಾನಗರ, ಉದಯನಗರ, ಸೇರಿದಂತೆ ಪ್ರತೀ ಗ್ರಾ.ಪಂ. ವ್ಯಾಪ್ತಿಗಳಲ್ಲೂ ಬೀದಿನಾಯಿ ಕಾಟ ಮಿತಿಮೀರಿದ್ದು ಕೆಲಸಕ್ಕೆ ಹೋಗಿ ಬರುವ ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು, ವಾಹನ ಸವಾರರು ಭಯದ ವಾತಾವರಣದಲ್ಲಿ ಓಡಾಡುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಪಂಚಾಯಿತಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನೆ ಶೂನ್ಯವಾಗಿದೆ.