ಕ್ರೀಡೆಯಿಂದ ಶಾರೀರಿಕ, ಬೌದ್ಧಿಕ ಬೆಳವಣಿಗೆ ಸಾಧ್ಯ: ರೆ.ಫಾ.ಸಿನೋಜ್ನರಸಿಂಹರಾಜಪುರ, ಕ್ರೀಡೆಯಿಂದ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಯಾಗಲಿದೆ ಎಂದು ಶೆಟ್ಟಿಕೊಪ್ಪದ ಚರ್ಚನ ರೆ.ಫಾ ಸಿನೋಜ್ ತಿಳಿಸಿದರು.ಬುಧವಾರ ತಾಲೂಕಿನ ಶೆಟ್ಟಿಕೊಪ್ಪದ ಬರ್ಕಮನ್ ಪ್ರೌಢ ಶಾಲೆಯಲ್ಲಿ ನಡೆದ ನ.ರಾ.ಪುರ ವಲಯ ಮಟ್ಟದ ಪ್ರೌಢ ಶಾಲಾ ವಿಭಾಗದ ಥ್ರೋಬಾಲ್ ಕ್ರೀಡಾ ಕೂಟದ ಸಮಾರೋಪದಲ್ಲಿ ಮಾತನಾಡಿ, ಆಟ ಆಡುವುದರಿಂದ ಮಾನಸಿಕ ಒತ್ತಡ ಸಹ ಕಡಿಮೆಯಾಗಲಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೂ ಅನುಕೂಲವಾಗುತ್ತದೆ. ಕ್ರೀಡೆಯಲ್ಲಿ ಸೋಲು, ಗೆಲವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಎಂದರು.