ಚಿಟ್ ಫಂಡ್ ವಂಚನೆ: ಸಂತ್ರಸ್ತರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹಚಿಕ್ಕಮಗಳೂರು, ಸರ್ಕಾರ ಚಿಟ್ ಫಂಡ್ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ವರ್ಷಗಳೇ ಕಳೆದರೂ ಈ ಕಂಪನಿಗಳಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ಇದುವರೆಗೆ ಹಣ ಮರುಪಾವತಿ ಮಾಡಿಲ್ಲ. ಕೂಡಲೆ ಹೂಡಿಕೆದಾರರಿಗೆ ಹಣ ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದಿಂದ ನಗರ ಆಜಾದ್ ಪಾರ್ಕ್ ವೃತ್ತದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.