ಶೃಂಗೇರಿ ಮುಂದುವರಿದ ಮಳೆ ಆರ್ಭಟ : ಅಲ್ಲಲ್ಲಿ ಗುಡ್ಡಕುಸಿತ,ಶೃಂಗೇರಿ, ತಾಲೂಕಿನಾದ್ಯಂತ ನಾಲ್ಕೈದು ದಿನಗಳಿಂದ ನಿರಂತರವಾಗಿ ಅಬ್ಬರಿಸಿದ ಮಳೆ ಗುರುವಾರವೂ ಹಗಲಿಡೀ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಬುಧವಾರ ರಾತ್ರಿಯಿಂದ ಗುರುವಾರ ಸಂಜೆಯವರೆಗೂ ಆರ್ಭಟಿಸಿತು. ಮಳೆಯ ಆರ್ಭಟದಿಂದ ತುಂಗಾನದಿ ಮತ್ತೆ ತುಂಬಿ ಹರಿಯುತ್ತಿದೆ. ತಾಲೂಕಿನ ವಿವಿಧೆಡೆ ಮತ್ತೆ ಗುಡ್ಡಗಳು ಕುಸಿಯುತ್ತಿದ್ದು, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.